Advertisement
ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯನ್ನು ಒಳಗೊಂಡಿ ರುವ ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 165 ಕಡೆಗಳಲ್ಲಿ ಮತ್ತು ಜಿಲ್ಲಾ ವ್ಯಾಪ್ತಿಯ 221 ಸೇರಿ ಒಟ್ಟು 386 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲೂ ಗೌರಿ, ಗಣೇಶ ಹಬ್ಬಕ್ಕಾಗಿ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಂಘ ಸಂಸ್ಥೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಗುರುವಾರ ನಗರಾದ್ಯಂತ ಖರೀದಿ ಸಂಭ್ರಮ ಅಧಿಕವಾಗಿತ್ತು. ಮಹಿಳೆಯರು ಗೌರಿ ಹಬ್ಬಕ್ಕೆ ಬೇಕಿರುವ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಶುಕ್ರವಾರ ಬಹುಪಾಲು ಮಹಿಳೆಯರು ಮನೆಯಲ್ಲೇ ಪೂಜೆ ಸಲ್ಲಿಸುತ್ತಾರೆ. ಕೆಲವರು ದೇವಸ್ಥಾನಕ್ಕೆ ಬರುವುದು ಉಂಟು. ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಯಲಿದೆ.
Related Articles
ನಗರದ ಎಲ್ಲ ಅಂಗಡಿಗಳು, ಮಾಲ್‌ಗಳಲ್ಲಿ ಜನರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸುವಲ್ಲಿ ನಿರತ ರಾಗಿದ್ದರು. ಕಲ್ಸಂಕ, ಸಿಟಿ ಬಸ್ ನಿಲ್ದಾಣ, ತೆಂಕಪೇಟೆ, ಬಡಗುಪೇಟೆ ಭಾಗಗಳಲ್ಲಿ ಟ್ರಾಫಿಕ್ ದಟ್ಟಣೆ ಕಂಡುಬಂತು. ಈ ನಡುವೆ ಬಿಟ್ಟು ಬಿಟ್ಟು ಮಳೆ ಸುರಿದರೂ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿರಲಿಲ್ಲ. ರಾತ್ರಿಯವರೆಗೂ ಜನರ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು.
Advertisement
ಹೂವುಗಳ ಖರೀದಿನಗರದಲ್ಲಿ ಹೊರಜಿಲ್ಲೆಯ ವ್ಯಾಪಾರಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಹೂವುಗಳ ಮಾರಾಟದಲ್ಲಿ ನಿರತರಾಗಿದ್ದಾರೆ. ನಗರದ ಹೂವಿನ ಹಾಗೂ ಹಣ್ಣು ಮಾರಾಟದಲ್ಲೂ ಉತ್ತಮ ವ್ಯಾಪಾರ ನಡೆಯಿತು. ಬೇಕರಿ ತಿನಿಸುಗಳ ಖರೀದಿಗೂ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಕಂಡುಬಂತು.