Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ 63 ವರ್ಷಗಳ ಹಿಂದೆ ಕೇವಲ 3,500 ಕೋಟಿ ರೂ.ಬಂಡಾವಳ ಹಾಕಿ ಸಾರಿಗೆ ಸಂಸ್ಥೆಗಳನ್ನು ಹುಟ್ಟು ಹಾಕಿತ್ತು. ಸಾರಿಗೆ ನೌಕರರು ಮತ್ತು ಕಾರ್ಮಿಕರ ಪರಿಶ್ರಮದಿಂದ ಈಗ ಒಂದು ಲಕ್ಷ ಕೋಟಿ ಆಸ್ತಿಯಾಗಿದೆ. ಆದರೆ, ಸರ್ಕಾರದ ತಪ್ಪು ಧೋರಣೆಯಿಂದ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಸರ್ಕಾರದ ಸಾಮಾಜಿಕ ಹೊಣೆಗಾರಿಕೆಯನ್ನು ಸಾರಿಗೆ ನಿಗಮಗಳು ಹೊರುತ್ತಿದ್ದು, ಅದಕ್ಕೆ ಪರಿಹಾರ ಧನ ಕೊಡುತ್ತಿಲ್ಲ. ವೃತ್ತಿಪರ ಸಂಸ್ಥೆಯಾಗಿ ನಡೆಸಲೂ ಬಿಡುತ್ತಿಲ್ಲ ಎಂದು ಕಿಡಿಕಾರಿದರು.
Related Articles
Advertisement
ಕೊರೊನಾಗೆ 50 ಜನ ಬಲಿ: ಕೊರೊನಾ ಸಂದರ್ಭದಲ್ಲಿ ಕಾರ್ಮಿಕರ ಸ್ಥಳಾಂತರ ಮತ್ತು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ನಾಲ್ಕು ನಿಗಮಗಳ 50 ಜನ ನೌಕರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಆದರೆ, ಇದುವರೆಗೂ ಸರ್ಕಾರ ಘೋಷಿಸಿದ 30 ಲಕ್ಷ ರೂ. ಪರಿಹಾರ ಸಿಕ್ಕಿಲ್ಲ. ತಕ್ಷಣವೇ ಮೃತ ನೌಕರರ ಕುಟುಂಬಗಳಿಗೆ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಅನಂತಸುಬ್ಬರಾವ ಮನವಿ ಮಾಡಿದರು.
ಕರ್ತವ್ಯದಲ್ಲಿದ್ದಾಗ ಕೊರೊನಾ ಬಂದು ಸಾವನ್ನಪ್ಪಿದ್ದರೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ನಾವು ಕರ್ತವ್ಯದಲ್ಲಿ ಇರಲಿ, ಬಿಡಲಿ ಸಾರಿಗೆ ನೌಕರ ಕೊರೊನಾದಿಂದ ಮೃತಪಟ್ಟರೆ, ಆತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಸಾರಿಗೆ ಸಚಿವ ಮೇಲೆ ಒತ್ತಡ ಹಾಕಿದ್ದೇವು. ಅದಕ್ಕೆ ಸಚಿವರು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್, ಮುಖಂಡರಾದ ಎಚ್.ಎಸ್.ಪದಕಿ, ಸಿದ್ದಪ್ಪ ಪಾಲ್ಕಿ, ಪ್ರಭುದೇವ ಯಳಸಂಗಿ ಹಣಮಂತರಾಯ ಅಟ್ಟೂರ ಇದ್ದರು.
ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರು ಆಗುವುದೇ ಬೇಕಾಗಿಲ್ಲ: ಎಚ್.ವಿ. ಅನಂತಸುಬ್ಬರಾವ ಕಲಬುರಗಿ: ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಸರ್ಕಾರಿ ನೌಕರರು ಮತ್ತು ಸಾರಿಗೆ ನೌಕರರ ಸಂಬಳದಲ್ಲಿ ಭಾರೀ ವ್ಯತ್ಯಾಸ ಉಂಟಾಗಿದೆ. ನಿಯಮಗಳ ಪ್ರಕಾರ ಸಾರಿಗೆ ನೌಕರರಿಗೆ ಸರ್ಕಾರಿ ನೌಕರಗಿಂತ ಹೆಚ್ಚು ಸಂಬಳ ಸಿಗುತ್ತದೆ. ಸರ್ಕಾರಿ ನೌಕರರು ಆಗುವುದೇ ಬೇಕಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್ .ವಿ.ಅನಂತ ಸುಬ್ಬರಾವ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಾಲ್ಕು ವರ್ಷಕ್ಕೊಮ್ಮೆ ಸ್ವಲ್ಪ ಹಣ ಹೆಚ್ಚಾಗಿ ಕೊಟ್ಟು ವೇತನ ಹೆಚ್ಚಳ ಎಂದು ಕರೆಯುತ್ತಿದೆ. 2004ರಿಂದ ನೌಕರರ ವೇತನವನ್ನು ಶೇ.6ರಷ್ಟು ಹೆಚ್ಚಿಸಿ, ಬಡ್ಡಿ ಸಮೇತ ಕೊಡಬೇಕು ಮತ್ತು ಚಾಲಕ-ನಿರ್ವಾಹಕರ ದೈನಂದಿನ ಭತ್ಯೆಯನ್ನು ಎರಡು ಪಟ್ಟು ಮಾಡಬೇಕೆಂದು ಕೈಗಾರಿಕಾ ನ್ಯಾಯಾಧಿಕರಣವು 2017ರಲ್ಲೇ ತೀರ್ಪು ನೀಡಿದೆ. ಆದರೆ, ಸರ್ಕಾರ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಾಕಿ ತಡೆಯಾಜ್ಞೆ ತಂದಿದೆ.
ಸರ್ಕಾರದ ಈ ನೀತಿಯಿಂದ ವೇತನದ ವಿಷಯದಲ್ಲಿ ನೌಕರರಿಗೆ ಅಸಮಾಧಾನ ಇದೆ. ಈಗ 2020ರ ಜನವರಿಯಿಂದ ವೇತನ ಹೆಚ್ಚಳಕ್ಕಾಗಿ ನೌಕರರು ಕಾದಿದ್ದಾರೆ ಎಂದರು. ನಮ್ಮ ಸಂಘಟನೆ ಎಂದೂ ಬಂದ್ ಮಾಡಿಲ್ಲ. ಮುಷ್ಕರದ ಹೆಸರಲ್ಲಿ ಹೋರಾಟ ಮಾಡಿ ಎರಡು ಬಾರಿ ಸಂಬಳ ಏರಿಕೆ ಆಗುವಂತೆ ಮಾಡಿತ್ತು. ಆದರೆ, ಮೊನ್ನೆ ನಾಲ್ಕು ದಿನಗಳ ಕಾಲ ಬಂದ್ ಮಾಡಿದರೂ ಸರ್ಕಾರದಿಂದ ಕೇವಲ ಭರವಸೆ ಸಿಕ್ಕಿದೆ ಹೊರತು ಒಂದು ಪೈಸೆ ತರಲೂಆಗಿಲ್ಲ. ಅಲ್ಲದೇ, ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ ಸರ್ಕಾರ ಸ್ಪಪ್ಟವಾಗಿ ಹೇಳಿದೆ. ನಾನೂ ರೈತನ ಮಗ. ಆದರೆ, ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು ರೈತರ ಹೋರಾಟಕ್ಕೆ ಹೋಗಿಲ್ಲ. ಏನೂ ತಿಳಿಯದೆ ಹೋರಾಟಕ್ಕೆ ಇಳಿದರೆ ಹೀಗೆ ಆಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಗೆ ಅವರು ಟಾಂಗ್ ನೀಡಿದರು.