Advertisement

JDS-BJP ಮೈತ್ರಿ ಸ್ಪರ್ಧಿಗಳು ಪ್ರಜ್ವಲ್‌ ಫೋಟೋ ಹಾಕಿಕೊಂಡು ಮತ ಕೇಳಲಿ: ಬಾಬು

12:12 AM May 12, 2024 | Team Udayavani |

ತುಮಕೂರು: ಚುನಾವಣೆಗಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದನ್ನು ಸ್ವಾಗತಿಸುತ್ತೇನೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇನ್ನೂ ಸಮಯ ಇರುವುದರಿಂದ ಮೈತ್ರಿ ಪಕ್ಷಗಳ ನಾಯಕರು ಪ್ರಜ್ವಲ್‌ ಅವರ ಫೋಟೋ ಹಾಕಿಕೊಂಡು ಮತ ಕೇಳಲಿ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿಗೆ ನಮ್ಮದೇನೂ ಅಭ್ಯಂತರವಿಲ್ಲ, ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಈ ಎರಡೂ ಪಕ್ಷಗಳ ಮೈತ್ರಿಗೆ ಪ್ರಬುದ್ಧ ಶಿಕ್ಷಕ ಮತದಾರರು ಉತ್ತರ ನೀಡಿದ್ದಾರೆ. ಇನ್ನುಳಿದ ಚುನಾವಣೆಗಳಲ್ಲಿ ಪ್ರಜ್ವಲ್‌ ಅವರ ಫೋಟೋ ಹಾಕಿಕೊಂಡು ಮತ ಕೇಳಲು ಹೋಗಲಿ ಎಂದರು.

ನಾನು, ಎಸ್‌.ಆರ್‌.ಶ್ರೀನಿವಾಸ್‌, ಮಧು ಬಂಗಾರಪ್ಪ, ಎಂ.ಸಿ. ನಾಣಯ್ಯ, ಪಿಜಿಆರ್‌ ಸಿಂಧ್ಯಾ ಅವರನ್ನೆಲ್ಲ ಕುಮಾರಸ್ವಾಮಿ ಅವರು ಆಚೆ ಕಳುಹಿಸುವಂತಹ ವಾತಾವರಣ ಸೃಷ್ಟಿ ಮಾಡಿದರು. ನಾವ್ಯಾರೂ ನಾವಾಗಿಯೇ ಆಚೆ ಬಂದವರಲ್ಲ ಎಂದರು. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಅವರಿಗಿಂತ ನಾನೇ ಸೀನಿಯರ್‌. ಅವರು ನಡೆಸಿಕೊಂಡ ರೀತಿಯಿಂದ ಎಲ್ಲರೂ ಬೇಸರಗೊಂಡು ಜೆಡಿಎಸ್‌ ಬಿಟ್ಟು ಬಂದಿದ್ದೇವೆಂದರು.

 

Advertisement

Udayavani is now on Telegram. Click here to join our channel and stay updated with the latest news.

Next