ಅರಕಲಗೂಡು: ರಾಜ್ಯ ಸರಕಾರದ ವ್ಯಾಪ್ತಿಗೆ ಒಳಪಡುವ ಲ್ಯಾಂಡ್ ಆರ್ಮಿ ಸಂಸ್ಥೆ ಪಟ್ಟಣದಲ್ಲಿ ನಿರ್ವಹಿಸುತ್ತಿರುವ ಕಟ್ಟಡಗಳ ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದಲೂ ಲ್ಯಾಂಡ್ ಆರ್ಮಿ ನಿರ್ವ ಹಿಸುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ಕಳಪೆ ಎಂದು ತಜ್ಞರಿಂದ ವರದಿ ಸಲ್ಲಿಕೆಯಾಗಿದ್ದರೂ ಕೂಡ ಕಾಮಗಾರಿ ಸ್ಥಗಿತ ಗೊಳಿಸದೇ ಪುನಃ ಕಳಪೆಯಿ ಂದಲೇ ಕೆಲಸವನ್ನು ಮುಂದುವರಿಸಲಾಗಿದೆ. ಇದೇ ನಿಟ್ಟಿನಲ್ಲಿ ಬಡ ಹೆಣ್ಣಮಕ್ಕಳು ಓದುತ್ತಿರುವ ಪಟ್ಟಣದ ಸರಕಾರಿ ಬಾಲಕಿಯರ ಪಿಯು ಕಾಲೇಜಿನ ನೂತನ ಕಟ್ಟಡದ ಕಾಮಗಾರಿ 2 ಕೋಟಿ ರೂ.ವೆಚ್ಚದಲ್ಲಿ ನಡೆ ಯು ತ್ತಿದ್ದು ಅದು ಸಹ ಕಳಪೆಯಿಂದ ಮುಂದುವರಿದಿದೆ ಎಂದು ದೂರಿದ್ದಾರೆ.
ಸಂಪೂರ್ಣ ಕಳಪೆ ಕಾಮಗಾರಿ: ದಲಿತ ಸಂಘಟನೆಗಳು ಒಮ್ಮೆ ಉಗ್ರ ಪ್ರತಿಭಟನೆ ಮಾಡಿ, ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತಗೊಳಿಸಿದ್ದವು. ಇದ ನ್ನು ಲೆಕ್ಕಿಸದೇ ಉಳಿದ ಕಾಮಗಾರಿಯನ್ನು ಕಳಪೆಯಿಂದಲೇ ಮುಂದುವರಿಸಲಾಗಿದೆ. ಅದೇ ನಿಟ್ಟಿನಲ್ಲಿ ಬಾಲಕಿಯರ ಕಾಲೇ ಜಿನ ಕಟ್ಟ ಡ ಕಾಮಗಾರಿ ಇದೇ ನಿಟ್ಟಿನಲ್ಲಿ ಮುಂದುವರಿದಿದೆ. ಈ ಹೊಸ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿ ಂದ ಕೂಡಿದ್ದರೂ ಕೂಡ ಕಾಲೇಜು ಆಡಳಿತ ಮಂಡಳಿ ಗಮನಹರಿಸಿಲ್ಲ. ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಲ್ಯಾಂಡ್ ಆರ್ಮಿ ಎಂಜಿನಿಯರ್ ಗುಣಮಟ್ಟದಿಂದ ಕೆಲಸ ಮುಂದುವರಿಸುವುದಾಗಿ ಹೇಳಿದ್ದರೂ ಕೂಡ ಆ ನಿಟ್ಟಿನಲ್ಲಿ ಕಟ್ಟಡದ ಕೆಲಸ ಸಾಗಿಲ್ಲ. ಕಟ್ಟಡ ದ ಗೋಡೆ ಪ್ಲಾಸ್ಟರ್ ಇನ್ನೂ ಪೂರ್ಣಗೊಂಡಿಲ್ಲ. ಈ ನಡುವೆ ಟೈಲ್ಸ್ ಕೆಲಸ ನಡೆಯುತ್ತಿದೆ. ಕಟ್ಟಡದ ಕಿಟಕಿಗೆ ಅಳವಡಿಸಿರುವ ಕಬ್ಬಿಣದ ರಾಡ್ ತುಕ್ಕು ಹಿಡಿಯುತ್ತಿವೆ. ಮೇಲೆ ನಿರ್ಮಿಸಿರುವ ಪ್ಯಾರಾಪಿಟ್ ಗೋಡೆ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದರು.
ಡೀಸಿ ತುರ್ತು ಕ್ರಮ ಕೈಗೊಳ್ಳಬೇಕು: ಕ್ಷೇತ್ರದ ಶಾಸಕ ರಾಮಸ್ವಾಮಿ ಅವರು,ಮಕ್ಕಳ ಶೈಕ್ಷಣಿಕ ಬೆಳ ವಣಿಗೆ ಹಿನ್ನೆಲೆ ಅನುದಾನವನ್ನು ತಂದು ಕಾಲೇಜಿಗೆ ನೀಡಿದ್ದಾರೆ. ಲ್ಯಾಂಡ್ ಆರ್ಮಿ ಅವರು ತುಂಡು ಗುತ್ತಿಗೆ ನೀಡಿ ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಲ್ಯಾಂಡ್ ಆರ್ಮಿ ನಿರ್ವಹಿಸಿರುವ, ನಿರ್ವ ಹಿಸುತ್ತಿರುವ ಯಾವುದೇ ಕಟ್ಟಡ ಕಾಮ ಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಕೇವಲ ಸರಕಾರಿ ಹಣವನ್ನು ದುರುಪಯೋಗ ಪಡಿಸಿಕೊಳ್ಳು ವುದೇ ಇವರ ಕಾಯಕವಾಗಿದೆ. ಕೂಡಲೇ ಜಿಲ್ಲಾಧಿಕಾರಿ ಈ ಎರಡು ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು. ಇಲ್ಲವಾ ದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.