Advertisement

Assembly election results: ಮತದಾನೋತ್ತರ ಸಮೀಕ್ಷೆಗಳೆಲ್ಲ ಸುಳ್ಳಾದವು!

12:40 AM Dec 04, 2023 | Team Udayavani |

ಛತ್ತೀಸ್‌ಗಢದಲ್ಲಿ ಮತದಾನೋತ್ತರವಾಗಿ ವಿವಿಧ ಸಂಸ್ಥೆಗಳು ನೀಡಿದ ಫ‌ಲಿತಾಂಶಗಳೆಲ್ಲ ಸುಳ್ಳಾಗಿವೆ. ನ್ಯೂಸ್‌24-ಟುಡೇಸ್‌ ಚಾಣಕ್ಯ, ದೈನಿಕ್‌ ಭಾಸ್ಕರ್‌, ಟೈಮ್ಸ್‌ ನೌ-ಇಟಿಜಿ, ಎಬಿಪಿ ನ್ಯೂಸ್‌-ಸಿವೋಟರ್‌, ಇಂಡಿಯಾ ಟುಡೇ-ಆ್ಯಕ್ಸಿಸ್‌ ಮೈ ಇಂಡಿಯಾ, ರಿಪಬ್ಲಿಕ್‌ ಟೀವಿ-ಮ್ಯಾಟ್ರಿಜ್‌, ಟಿವಿ9-ಭರತವರ್ಷ ಪೋಸ್ಟ್ರಾಟ್‌, ಇಂಡಿಯಾ ಟಿವಿ-ಸಿಎನ್‌ಎಕ್ಸ್‌ಗಳು ನೀಡಿದ ಫ‌ಲಿತಾಂಶಗಳೆಲ್ಲ ಕಾಂಗ್ರೆಸ್‌ ಪರವಾಗಿಯೇ ಇದ್ದವು. ಭೂಪೇಶ್‌ ಬಘೇಲ್‌ ನೇತೃತ್ವದ ಸರಕಾರ ಮರಳಿ ಅಧಿಕಾರ ಹಿಡಿಯುತ್ತದೆ ಎನ್ನಲಾಗಿತ್ತು. ಹಾಗಂತ ಬಿಜೆಪಿಯದ್ದು ಕಳಪೆ ಸಾಧನೆ ಎಂದೇನು ಹೇಳಿರಲಿಲ್ಲ.

Advertisement

ಕಾಂಗ್ರೆಸ್‌ ಮುನ್ನಡೆ ಎಂದಷ್ಟೇ ಬಿಂಬಿಸಲಾಗಿತ್ತು. ಹೀಗಾಗಿ ಅತಂತ್ರ ಫ‌ಲಿತಾಂಶದ ಅಂದಾಜನ್ನೂ ಮಾಡಲಾಗಿತ್ತು. ಅಂತಹದ್ದೇನೂ ಆಗಲಿಲ್ಲ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next