Advertisement
ಕಳೆದ ಸ್ವಿಸ್ ಓಪನ್ ಫೈನಲ್‌ನಲ್ಲಿ ಕೈಜಾರಿದ್ದ ಪ್ರಶಸ್ತಿಯನ್ನು ಬ್ರಿಟನ್ ಕೂಟದಲ್ಲಿ ಎತ್ತಿ ಹಿಡಿಯುವುದು ಸಿಂಧು ಅವರ ಗುರಿ. ಗಾಯಾಳಾದ ಕಾರಣ ಸ್ವಿಸ್ ಚಾಂಪಿಯನ್ ಮರಿನ್ ಈ ಪಂದ್ಯಾವಳಿಯಿಂದ ದೂರ ಸರಿದಿದ್ದಾರೆ. ಜತೆಗೆ ಚೀನ, ಕೊರಿಯಾ ಮತ್ತು ಚೈನಿಸ್ ತೈಪೆಯ ಪ್ರಮುಖ ಆಟಗಾರರೂ ಈ ಸೂಪರ್ 1000 ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದು ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಅವಧಿಯ ಪಂದ್ಯಾವಳಿ ಆಗಿಲ್ಲದಿರುವುದೇ ಇದಕ್ಕೆ ಕಾರಣ.
Related Articles
ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಇಂಡೋನೇಶ್ಯದ ಟಾಮಿ ಸುಗಿಯಾರ್ಟೊ ವಿರುದ್ಧ, ಬಿ. ಸಾಯಿ ಪ್ರಣೀತ್ ಫ್ರಾನ್ಸ್‌ನ ಟೋಮ ಜೂನಿಯರ್ ಪೊಪೋವ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಪಿ. ಕಶ್ಯಪ್ ಅವರಿಗೆ ಕಠಿನ ಸವಾಲು ಎದುರಾಗಿದ್ದು, ನಂ.1 ಆಟಗಾರ ಕೆಂಟೊ ಮೊಮೊಟ ವಿರುದ್ಧ ಸೆಣಸಬೇಕಿದೆ. ಎಚ್.ಎಸ್. ಪ್ರಣಯ್ ಅವರ ಮೊದಲ ಸುತ್ತಿನ ಎದುರಾಳಿ ಮಲೇಶ್ಯದ ಡ್ಯಾರೆನ್ ಲ್ಯೂ.
Advertisement