Advertisement

22ಕ್ಕೆ “ಮಾತೃಪೂರ್ಣ’ಯೋಜನೆ ಖಂಡಿಸಿ ಎಲ್ಲ ಡಿಸಿ ಕಚೇರಿ ಪ್ರತಿಭಟನೆ

11:47 AM Sep 19, 2017 | |

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ “ಮಾತೃ ಪೂರ್ಣ’ ಯೋಜನೆ ಅನುಷ್ಠಾನದ ಕ್ರಮ ಖಂಡಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಸೆ.22ರಂದು ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸರ್ಕಾರ ರೂಪಿಸಿರುವ ಯೋಜನೆ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅದನ್ನು ಅನುಷ್ಠಾನಗೊಳಿಸುತ್ತಿರುವ ಕ್ರಮ ಅವೈಜ್ಞಾನಿಕವಾಗಿದೆ.

Advertisement

ಈ ಸಂಬಂಧ ಸರ್ಕಾರಕ್ಕೆ ಮನದಟ್ಟು ಮಾಡಿದ್ದರೂ ಪ್ರಯೋಜನವಾಗಿಲ್ಲ. ಬದಲಿಗೆ ಅ. 2ರಂದು ಜಾರಿಗೊಳಿಸಲು ಸರ್ಕಾರ ಹಠಕ್ಕೆ ಬಿದ್ದಿದೆ. ಆದ್ದರಿಂದ ಇದನ್ನು ಖಂಡಿಸಿ 22ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಹಾಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಜಿ.ಆರ್‌. ಶಿವಶಂಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ರಾಜ್ಯದಲ್ಲಿ 61,187 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ ಸುಮಾರು 26 ಸಾವಿರ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಹುತೇಕ ಕೇಂದ್ರಗಳಿಗೆ ಶೌಚಾ ಲಯ, ಕುಳಿತು ಊಟ ಮಾಡಲು ಪೀಠೊಪಕರಣ ಗಳು ಸೇರಿ ಸೌಲಭ್ಯಗಳಿಲ್ಲ, ಅಲ್ಲದೆ ಗರ್ಭಿಣಿ, ಬಾಣಂತಿ ಯರ ಮನೆ ಮತ್ತು ಅಂಗನವಾಡಿ ಕೇಂದ್ರ ನುಡುವೆ ಕಿಲೋ ಮೀಟರ್‌ ಗಟ್ಟಲೆ ಅಂತರವಿರುವ ಪ್ರದೇಶಗಳೂ ಇವೆ. ಅಕಸ್ಮಾತ್‌ ಬಾಣಂತಿಯರಿಗೆ ಹೆಚ್ಚು ಕಡಿಮೆಯಾದರೆ ಯೋಜನೆ ಪ್ರಕಾರ ಕಾರ್ಯಕರ್ತೆಯರೇ ಜವಾಬ್ದಾರಿಯಾಗ ಬೇಕಾಗುತ್ತದೆ.

ಇದು ಸೂಕ್ಷ್ಮ ವಿಚಾರ ಸರ್ಕಾರ ಈ ಬಗ್ಗೆ ಯೋಚಿಸುತ್ತಿಲ್ಲ ಎಂದರು. 2015-16ರಲ್ಲಿ ತುಮಕೂರಿನ ಮಧುಗಿರಿ, ಮೈಸೂ ರಿನ ಹೆಗ್ಗಡದೇವನ ಕೋಟೆ, ರಾಯಚೂರಿನ ಮಾನ್ವಿ, ವಿಜಯಪುರದ ಜಮಖಂಡಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದರೆ, ಹಲವು ಸಮಸ್ಯೆಗಳು ಕಂಡುಬಂದಿದ್ದು, ಬಹುತೇಕ ಯೋಜನೆ ಯಶಸ್ವಿಯಾಗಿಲ್ಲ ಎಂದು ಹೇಳಲಾಗಿದೆ. ಹೀಗಿರುವಾಗ, ರಾಜ್ಯಾದ್ಯಂತ ಅದನ್ನು ವಿಸ್ತರಿಸುವುದು ಎಷ್ಟು ಸರಿ ಎಂದು ಶಿವಶಂಕರ್‌ ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next