Advertisement

ಪಾಕ್‌ ಇ-ಕಾಮರ್ಸ್‌ ಸಂಸ್ಥೆ ಖರೀದಿಸಿದ ಅಲಿಬಾಬಾ

10:07 AM May 11, 2018 | Karthik A |

ಬೀಜಿಂಗ್‌ : ಭಾರತದ ಇ- ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಖರೀದಿಸಲು ವಾಲ್‌ಮಾರ್ಟ್‌ ನಿರ್ಧರಿಸುತ್ತಿದ್ದಂತೆಯೇ, ವಾಲ್‌ ಮಾರ್ಟ್‌ ಗೆ ಪ್ರತಿಸ್ಪರ್ಧಿ ಸಂಸ್ಥೆ ಅಲಿಬಾಬಾ ನೆರೆಯ ಪಾಕಿಸ್ಥಾನದ ‘ದರಾಜ್‌’ ಎಂಬ ಇ-ಕಾಮರ್ಸ್‌ ತಾಣ ಖರೀದಿಸಲು ನಿರ್ಧರಿಸಿದೆ. 2012ರಲ್ಲಿ ದರಾಜ್‌ ಪಾಕಿಸ್ತಾನದಲ್ಲಿ ಕಾರ್ಯಾರಂಭ ಮಾಡಿತ್ತು. ಇದನ್ನು ಬರ್ಲಿನ್‌ ಮೂಲದ ಆನ್‌ ಲೈನ್‌ ಸ್ಟಾರ್ಟಪ್‌ ಇನ್‌ ಕ್ಯುಬೇಟರ್‌ ಸಂಸ್ಥೆ ರಾಕೆಟ್‌ ಇಂಟರ್‌ ನೆಟ್‌ ನಿಂದ ಖರೀದಿಸಲಾಗಿತ್ತು. ದರಾಜ್‌ ನ ಪ್ರಮುಖ ಮಾರುಕಟ್ಟೆ ಪಾಕಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್‌ ಮತ್ತು ನೇಪಾಲವಾಗಿದ್ದು, 30 ಸಾವಿರ ವ್ಯಾಪಾರಿಗಳು ಹಾಗೂ 500 ಬ್ರಾಂಡ್‌ಗಳನ್ನು ಹೊಂದಿದೆ. ಆದರೆ ಒಪ್ಪಂದದ ಹಣಕಾಸು ಮಾಹಿತಿ ಬಹಿರಂಗಗೊಂಡಿಲ್ಲ.

Advertisement

ಬನ್ಸಲ್‌ರಿಂದ ಗೇಮಿಂಗ್‌ ಸ್ಟಾರ್ಟಪ್‌?: ವಾಲ್‌ಮಾರ್ಟ್‌ ಗೆ ಫ್ಲಿಪ್‌ ಕಾರ್ಟ್‌ ಮಾರಾಟದ ಅನಂತರದಲ್ಲಿ ಸಂಸ್ಥೆಯಿಂದ ಹೊರಬರಲಿರುವ ಸಚಿನ್‌ ಬನ್ಸಾಲ್‌ ಫ್ಲಿಪ್‌ ಕಾರ್ಟ್‌ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಫೇಸ್‌ ಬುಕ್‌ ನಲ್ಲೂ ಪೋಸ್ಟ್‌ ಪ್ರಕಟಿಸಿರುವ ಸಚಿನ್‌, ಕೋಡಿಂಗ್‌ ಬಗ್ಗೆ ಹೆಚ್ಚಿನ ಗಮನಹರಿಸುತ್ತೇನೆ ಮತ್ತು ಗೇಮಿಂಗ್‌ ಪ್ರಾಜೆಕ್ಟ್ ಮುಂದುವರಿಸಲಿದ್ದೇನೆ ಎಂದಿದ್ದಾರೆ. ಅವರು ಗೇಮಿಂಗ್‌ ಸ್ಟಾರ್ಟಪ್‌ ಆರಂಭಿಸುತ್ತಾರೆ ಎಂಬ ಊಹಾಪೋಹ ಎದ್ದಿದೆ. 

ವಿರೋಧ: ಫ್ಲಿಪ್‌ಕಾರ್ಟ್‌ ಅನ್ನು ವಾಲ್‌ಮಾರ್ಟ್‌ ಖರೀದಿಸುವ ನಿರ್ಧಾರಕ್ಕೆ ವ್ಯಾಪಾರಿಗಳು ವಿರೋಧಿಸಿದ್ದಾರೆ. ಆದರೆ ಉದ್ಯಮದ ಮುಖಂಡರು ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಇದು ಭಾರತದ ಇ-ಕಾಮರ್ಸ್‌ ಉದ್ಯಮಕ್ಕೆ ಪ್ರೋತ್ಸಾಹ ನೀಡಲಿದೆ ಎಂದು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಹೇಳಿದ್ದರೆ, ದೀರ್ಘ‌ಕಾಲದಲ್ಲಿ ಭಾರತದ ಇ-ಕಾಮರ್ಸ್‌ ಕ್ಷೇತ್ರ ನಿಯಂತ್ರಿಸಲು ವಾಲ್‌ಮಾರ್ಟ್‌ ಈ ಮೂಲಕ ಯತ್ನಿಸುತ್ತಿದೆ ಎಂದಿದ್ದಾರೆ ವ್ಯಾಪಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next