Advertisement

ಟ್ರೆಂಡ್‌ ಆಯಿತು #BoycottBrahmastra: ಆಲಿಯಾ ಭಟ್‌ ವಿರುದ್ಧ ಆಕ್ರೋಶ; ನಟಿ ಹೇಳಿದ್ದೇನು?

05:49 PM Aug 23, 2022 | Team Udayavani |

ಮುಂಬಯಿ: ಇತ್ತೀಚಿಗೆ ಬಾಲಿವುಡ್‌ ಸಿನಿಮಾಗಳು ಸೋಲುತ್ತಿವೆ. ಸ್ಟಾರ್‌ ನಟರ ಚಿತ್ರಗಳಿಗೆ ಬಾಯ್ಕಾಟ್‌ ಬಿಸಿ ಜೋರಾಗಿ ತಟ್ಟುತ್ತಿದೆ. ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲೇ ಕೆಲ ಸ್ಟಾರ್‌ ಗಳು ನೀಡುವ ಹೇಳಿಕೆ ಅವರ ಮುಂದಿನ ಚಿತ್ರಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಇದೀಗ ಈ ಸಾಲಿಗೆ ನಟಿ ಆಲಿಯಾ ಭಟ್‌ ಸೇರಿದ್ದಾರೆ.

Advertisement

ಆಮಿರ್‌ ಖಾನ್‌ – ಕರೀನಾ ಕಪೂರ್‌ ಅವರ ʼಲಾಲ್‌ ಸಿಂಗ್‌ ಚಡ್ಡಾʼ ಚಿತ್ರ ಬಾಯ್ಕಾಟ್‌ ಅಭಿಯಾನಕ್ಕೆ ತುತ್ತಾಯಿತು. ಚಿತ್ರ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಕರೀನಾ ಕಪೂರ್‌ ಅವರ ಒಂದು ಹೇಳಿಕೆ ಕೂಡ ಚಿತ್ರದ ಕಲೆಕ್ಷನ್‌ ಮೇಲೆ ಪ್ರಭಾವ ಬೀರಿತ್ತು. ಈಗ ಅದೇ ಮಾದರಿಯಲ್ಲಿ ನಟಿ ಆಲಿಯಾ ಭಟ್‌ ಹೇಳಿಕೆಯೊಂದನ್ನು ನೀಡಿದ್ದು, ಆಲಿಯಾ ವಿರುದ್ಧ ಸಿಕ್ಕಾಪಟ್ಟೆ ಕಾಮೆಂಟ್ಸ್‌ ಕೇಳಿ ಬರುತ್ತಿದೆ.

ಇತ್ತೀಚೆಗೆ “ಮಿಡ್‌ ಡೇ” ಗೆ ನೀಡಿದ ಸಂದರ್ಶನವೊಂದರಲ್ಲಿ ಆಲಿಯಾ ನೆಪೋಟಿಸಂ ಬಗ್ಗೆ ಮಾತಾನಾಡುತ್ತಾ “ನೀವು ನನ್ನನ್ನು ಇಷ್ಟಪಡದ್ದಿದರೆ, ನನ್ನನ್ನು ನೋಡಬೇಡಿ, ನಾನು ಅದಕ್ಕೇನು ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ. ಸದ್ಯ ಈ ಮಾತು ವೈರಲ್‌ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲರ್‌ ಗಳಿಗೆ ಆಹಾರವಾಗಿದೆ.

ನೆಟ್ಟಿಗರು ಆಲಿಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಬಾಯ್ಕಾಟ್‌ ಅಭಿಯಾನ ಶುರು ಮಾಡುವ ಕುರಿತು ಚರ್ಚೆಗಳು ನಡೆದಿದೆ. ಅವರ ಮುಂದಿನ  “ಬ್ರಹ್ಮಾಸ್ತ್ರ” ಚಿತ್ರ ಯಾರೂ ನೋಡಬೇಡಿ, #BoycottBrahmastra ಎಂದು ಟ್ವೀಟ್‌ ಮಾಡಿದ್ದಾರೆ.

ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವ “ಬ್ರಹ್ಮಾಸ್ತ್ರ” ಸೆ.9 ರಂದು ರಿಲೀಸ್‌ ಆಗಲಿದೆ. ರಣ್ಬೀರ್‌ ಕಪೂರ್‌, ಅಮಿತಾಭ್‌ ಬಚ್ಚನ್‌, ನಾಗಾರ್ಜುನ‌,ಮೌನಿ ರಾಯ್‌ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next