Advertisement
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ತಾಲೂಕು, ಅಖೀಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಬೆಳ್ತಂಗಡಿ, ನಾಗಬ್ರಹ್ಮಸ್ಥಾನ ತೊತ್ತಾಡಿ, ಪ್ರಗತಿ ಬಂಧು ಸ್ವ ಸಹಾಯ ಸಂಘ ಒಕ್ಕೂಟ ಸುರತ್ಕಲ್ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ 1073ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.ಭವಿಷ್ಯದಲ್ಲಿ ಸುಖ ಸಂಸಾರ ಹೇಗೆ ಎಂಬುದರ ಕುರಿತು ಶಿಬಿರಾರ್ಥಿಗಳ ಕುಟುಂಬಿಕರಿಗೆ ಮಾಹಿತಿ ನೀಡಿದರು.
ಶಿಬಿರದಿಂದ ಹೊರ ಬಂದ ಬಳಿಕ ಮನೆಯವರು ಇವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಪ್ರೀತಿ, ಸಂಯಮದಿಂದ ಹಿಡಿದು ಅವರ ಜತೆ ಒಂದಿಷ್ಟು ಸಮಯ ಕಳೆಯುವುದು ಅವರ ಜತೆ ಬೆರೆತು ಅವರ ಬೇಕು ಬೇಡಗಳನ್ನು ಪೂರೈಸುವ ಮನಸ್ಸು ಮಾಡಿದರೆ ಶಾಶ್ವತವಾಗಿ ಮದ್ಯ ಸೇವನೆಯಿಂದ ಅವರನ್ನು ದೂರವಿಡಬಹುದು ಎಂದರು.