Advertisement
ಈ ಬಾರಿ ಮಳೆಗಾಲದ ಸಂದರ್ಭ ದಕ್ಕೆಯ ಬ್ರೇಕ್ ವಾಟರ್ ಕಾಮಗಾರಿ ಯಲ್ಲಿ ಲೋಪವುಂಟಾಗಿ ಮೀನು ಗಾರಿಕೆ ಸಚಿವರು ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಿದ್ದರು. ಇದೀಗ ಮತ್ತೆ ಕಾಮಗಾರಿ ಆರಂಭವಾಗಿದ್ದು ನಿತ್ಯ ಓಡಾಟ ನಡೆ ಸುವ ಗ್ರಾಮಸ್ಥರಿಗೆ ಬೃಹತ್ ಟ್ರಕ್‌ಗಳ ಓಡಾಟದಿಂದ ಜೀವ ಭಯ ಆವರಿಸಿದೆ.
ಸರ್ವ ಋತು ಬಂದರು ಇದಾಗಿರು ವುದರಿಂದ ಭವಿಷ್ಯದಲ್ಲಿ ಸಾವಿರಾರು ಲಾರಿ, ಟೆಂಪೋ, ಗೂಡ್ಸ್ ವಾಹನ ಬರಲಿರುವುದರಿಂದ ಪರ್ಯಾಯ ರಸ್ತೆಯ ಅಗತ್ಯವಿದೆ. ಹೆದ್ದಾರಿಯಿಂದ ನೇರ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆ ಮಾಡುವ ಕುರಿತಂತೆ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ.
Related Articles
Advertisement
ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ದಕ್ಕೆಯ ಬ್ರೇಕ್ ವಾಟರ್‌ಗೆ ಕಲ್ಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಬೃಹತ್ ಲಾರಿಗಳ ಓಡಾಟದಿಂದ ನಮ್ಮ ಗ್ರಾಮದ ರಸ್ತೆಗಳು ಹಾನಿಗೊಂಡಿವೆ. ಶಾಲಾ ಮಕ್ಕಳ, ಜನರ ಓಡಾಟಕ್ಕೆ ಅಡಚಣೆಯಾಗುತ್ತಿದೆ. ರಸ್ತೆಯನ್ನು ದುರಸ್ತಿ ಮಾಡುತ್ತಿಲ್ಲ. ಗ್ರಾಮಸ್ಥರು ಸೇರಿ ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಇದಕ್ಕೆ ಅವಕಾಶ ನೀಡದಂತೆ ಸೂಕ್ತ ಕ್ರಮ ಜರಗಿಸಬೇಕು.
-ಮಾಧವ ಎಲ್. ಸುವರ್ಣ, ಅಧ್ಯಕ್ಷರು ಪಣಂಬೂರು ಮೊಗವೀರ ಮಹಾಸಭಾ