ಇಂಡಿಯನ್ ವೆಲ್ಸ್: ಸ್ಪೇನ್‌ನ ಅಗ್ರ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ “ಇಂಡಿ ಯನ್ ವೆಲ್ಸ್ ಟೆನಿಸ್’ ಚಾಂಪಿಯನ್ ಆಗುವುದರೊಂದಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮರಳಿ ನಂ.1 ಸ್ಥಾನಕ್ಕೆ ಏರಿದ್ದಾರೆ. ನೊವಾಕ್ ಜೊಕೋವಿಕ್ ದ್ವಿತೀಯ ಸ್ಥಾನಕ್ಕೆ ಕುಸಿದರು.
ಕಾರ್ಲೋಸ್ ಅಲ್ಕರಾಜ್ ಫೈನಲ್ ಹೋರಾಟದಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ಅವರನ್ನು 6-3, 6-2 ನೇರ ಸೆಟ್‌ಗಳಿಂದ ಮಣಿಸಿದರು. ಈ ಕೂಟದ 6 ಪಂದ್ಯಗಳಲ್ಲಿ ಅವರು ಒಂದೂ ಸೆಟ್ ಕಳೆದುಕೊಳ್ಳದೆ ಪ್ರಶಸ್ತಿ ಎತ್ತಿದರು. ಹಾಗೆಯೇ ಮೆಡ್ವೆಡೇವ್ ಅವರ ಸತತ 19 ಪಂದ್ಯಗಳ ಗೆಲುವಿನ ಸರಪಣಿಯನ್ನೂ ಮುರಿದರು.
ಈ ಗೆಲುವು ಮುಂಬರುವ ಮಯಾಮಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಕಾಯ್ದುಕೊಳ್ಳಲು ಅಲ್ಕರಾಜ್ ಅವರಿಗೆ ಹೊಸ ಸ್ಫೂರ್ತಿ ತುಂಬಿದೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಕಾರಣ ನೊವಾಕ್ ಜೊಕೋವಿಕ್‌ಗೆ ಅಮೆರಿಕ ಪ್ರವೇಶಿಸಲು ವೀಸಾ ನಿರಾ ಕರಿಸಿದ ಕಾರಣ ಅವರಿಗೆ ಈ ಪಂದ್ಯಾ ವಳಿಯಲ್ಲಿ ಪಾಲ್ಗೊಳ್ಳಲು ಸಾಧ್ಯ ವಾಗಿರಲಿಲ್ಲ. ಪರಿಣಾಮ, ನಂ.1 ರ್‍ಯಾಂಕಿಂಗ್ ನಷ್ಟ.
Related Articles
ರಿಬಾಕಿನಾಗೆ ವನಿತಾ ಪ್ರಶಸ್ತಿ
ವನಿತಾ ಪ್ರಶಸ್ತಿ ವಿಂಬಲ್ಡನ್ ಚಾಂಪಿ ಯನ್ ಕಜಾಕ್‌ಸ್ಥಾನದ ಎಲೆನಾ ರಿಬಾಕಿನಾ ಪಾಲಾಗಿದೆ. ಫೈನಲ್ ನಲ್ಲಿ ಅವರು ಬೆಲರೂಸ್‌ನ ಅರಿನಾ ಸಬಲೆಂಕಾ ಸವಾಲನ್ನು ದಿಟ್ಟ ರೀತಿ ಯಲ್ಲಿ ಮೆಟ್ಟಿ ನಿಂತು 7-6 (13-11), 6-4 ಅಂತರದಿಂದ ಗೆದ್ದು ಬಂದರು. ಇದರೊಂದಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು. ಇದು ರಿಬಾಕಿನಾ ಅವರ ಮೊದಲ ಡಬ್ಲ್ಯುಟಿಎ 1000 ಫೈನಲ್ ಆಗಿತ್ತು.
ಸೆಮಿಫೈನಲ್ ಕದನದಲ್ಲಿ ರಿಬಾಕಿನಾ ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.1 ಖ್ಯಾತಿಯ ಐಗಾ ಸ್ವಿಯಾಟೆಕ್ ಅವರನ್ನು ಮಣಿಸಿದ್ದರು.