Advertisement
ಮಂಗಳವಾರ ಮಧ್ಯಾಹ್ನ ಕೃಷ್ಣಾ ತೀರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲಕಾಜಪ್ಪ ಮೇಟಿ ಅವರ ನೇತೃತ್ವದಲ್ಲಿ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿದ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಸಿ.ಬಿ.ಅಸ್ಕಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನತೆ ಮನೆ-ಮಠ, ಜಮೀನುಗಳನ್ನು ತ್ಯಾಗಮಾಡಿದ್ದಾರೆ. ನಾರಾಯಣಪುರದ ಬಸವಸಾಗರ ಮತ್ತು ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಗಳ ಹಿನ್ನೀರಿಗಾಗಿ ನೂರಾರು ಗ್ರಾಮಗಳ ಜನರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತ ಸಂತ್ರಸ್ತರಾಗಿದ್ದಾರೆ. ಅವರಲ್ಲಿ ಕೆಲವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಬೃಹತ್ ಮೊತ್ತದ ಒಂದೊಂದು ಪ್ಯಾಕೇಜ್ ಟೆಂಡರ್ ಕರೆಯುತ್ತಿರುವದರಿಂದ ಈ ಭಾಗದ ಗುತ್ತಿಗೆದಾರರು ನಿರುದ್ಯೋಗಿಗಳಾಗುವಂತಾಗಿದೆ ಎಂದು ಆರೋಪಿಸಿದರು.
Related Articles
Advertisement
ಸಂಘದ ಅಧ್ಯಕ್ಷ ಮಲಕಾಜಪ್ಪ ಮೇಟಿ ಮಾತನಾಡಿ, ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ವಲಯ ಮುಖ್ಯ ಅಭಿಯಂತರರ ಕಚೇರಿ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಭಾಗಗಳಲ್ಲಿ ಕರೆಯಲಾಗಿರುವ ಪ್ಯಾಕೇಜ್ ಟೆಂಡರ್ ಪದ್ದತಿಯನ್ನು ರದ್ದುಗೊಳಿಸಬೇಕು ಮತ್ತು ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಟೆಂಡರ್ ಕರೆಯಬೇಕು. ಈಗ ಕರೆಲಾಗಿರುವ ಪ್ಯಾಕೇಜ್ ಟೆಂಡರ್ ಪದ್ದತಿಯನ್ನು ಕೈಬಿಡಬೇಕು ಇಲ್ಲದಿದ್ದರೆ ಮುಖ್ಯ ಅಭಿಯಂತರರ ಕಚೇರಿಯ ಆವರಣದಲ್ಲಿ ಅರ್ನಿಷ್ಠ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಮನವಿಯನ್ನು ಉಪಮುಖ್ಯ ಅಭಿಯಂತರ ಡಿ.ಸುರೇಶ ಸ್ವೀಕರಿಸಿದರು. ರಾಯನಗೌಡ ತಾತರಡ್ಡಿ, ಜೆ.ಟಿ.ಇಲಕಲ್ಲ, ಎಚ್.ಟಿ.ಕುರಿ, ಎಸ್.ಐ.ಹಿರೇಮಠ, ಬಿ.ಪಿ.ರಾಠೊಡ, ವೈ.ವೈ.ಬಿರಾದಾರ, ಎಸ್.ಎಲ್.ಲಮಾಣಿ, ಪಿ.ಎಸ್ .ಬಯಾಪುುರ, ವೆಂಕಟೇಶ ನಾಯಕ, ಬಿ.ವಿ.ಮೈಲೇಶ್ವರ, ವೈ. ವೈ.ಚಲವಾದಿ ಇದ್ದರು.