ಜಿಸಿಬಿ ಪ್ರೊಡಕ್ಷನ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಕಥೆ ಬರೆದು ನಿರ್ಮಿಸುತ್ತಿರುವ “ಓ ಮೈ ಲವ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ಸಾಹಸ ಸನ್ನಿವೇಶವಿರುವ ದೃಶ್ಯಗಳ ಚಿತ್ರೀಕರಣದೊಂದಿಗೆ ಎರಡನೇ ಶೆಡ್ಯೂಲ್ ಪೂರ್ಣಗೊಳಿಸಿರುವ ಚಿತ್ರತಂಡ, ಈಗ ಹಾಡಿನ ಚಿತ್ರೀಕರಣದಲ್ಲಿ ಬಿಝಿಯಾಗಿದೆ.
ಯಲಹಂಕ ಬಳಿಯ ಮನೆಯೊಂದರಲ್ಲಿ ಹಾಡಿನ ಚಿತ್ರೀಕರಣ ನಡೆಸಿದೆ. ಫ್ಯಾಮಿಲಿ ಜೊತೆ ಗಿನ ಹಾಡಿನ ಚಿತ್ರೀಕರಣ ಇದಾಗಿದ್ದು, ನಾಗೇಂದ್ರ ಪ್ರಸಾದ್ ಬರೆದಿರುವ “ದೊಡ್ಡೋರು ಹಾಕಿದ ಒಂದು ಗಟ್ಟಿ ಸಸಿ..’ ಎಂದು ಆರಂಭವಾಗುವ ಹಾಡು ಇದಾಗಿದೆ. ಈ ಹಾಡಿನಲ್ಲಿ ನಾಯಕ ಅಕ್ಷಿತ್, ನಾಯಕಿ ಕೀರ್ತಿ, ಸುಂದರಶ್ರೀ, ಸಂಗೀತಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದನ್ನೂ ಓದಿ:ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ
“ರಾಬರ್ಟ್’ ಸಂತೋಷ್ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದೆ. ಈ ಚಿತ್ರಕ್ಕೆ ಚರಣ್ ಅರ್ಜುನ್ ಅವರ ಸಂಗೀತ, ರಿಯಲ್ ಸತೀಶ್ ಅವರ ಸಾಹಸ, ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ವಿ.ಮುರಳಿ ಅವರ ನೃತ್ಯ ನಿರ್ದೇಶನ, ಡಿ.ಮಲ್ಲಿಕ್ ಅವರ ಸಂಕಲನ, ಜನಾರ್ದನ್ ಅವರ ಕಲಾ ನಿರ್ದೇಶನವಿದೆ.
ಹಿರಿಯ ನಿರ್ದೇಶಕ ಎಸ್. ನಾರಾಯಣ, ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಪೃಥ್ವಿರಾಜ, ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ