Advertisement

ಅಕ್ಷಯ ತೃತೀಯಾ: ಕರಾವಳಿಯಲ್ಲಿ ಖರೀದಿ ಸಂಭ್ರಮ

01:20 AM May 04, 2022 | Team Udayavani |

ಮಂಗಳೂರು: ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಮರೆಯಾಗಿದ್ದ ಚಿನ್ನಾಭರಣ ಖರೀದಿಯ ಸಂಭ್ರಮ ಈ ವರ್ಷ ಅಕ್ಷಯ ತೃತೀಯಾದಂದು ಮತ್ತೆ ಜನರಲ್ಲಿ ಮನೆಮಾಡಿತ್ತು.

Advertisement

ವಾರದಿಂದ ಚಿನ್ನಾಭರಣ ಕಾದಿರಿಸಿ ಅಕ್ಷಯ ತೃತೀಯಾ ಶುಭದಿನವಾದ ಮಂಗಳವಾರ ಖರೀದಿಸಿದವರ ಸಂಖ್ಯೆ ಹೆಚ್ಚಿತ್ತು. ಬಹುತೇಕ ಆಭರಣದಂಗಡಿಗಳು ಬೆಳಗ್ಗೆ 8ರಿಂದ ರಾತ್ರಿ 9ರ ವರೆಗೂ ತೆರೆದಿದ್ದವು.

ಕೆಲವು ಅಭರಣ ಮಳಿಗೆಗಳು ಮಂಗಳವಾರವೇ ಆಕ್ಷಯ ತೃತೀಯಾ ವಿಶೇಷ ಕೊಡುಗೆಗಳನ್ನು ಅಂತ್ಯಗೊಳಿಸಿದರೆ ಕೆಲವು ಇನ್ನೂ ಎರಡು ದಿನ ಮುಂದುವರಿಸುತ್ತಿವೆ. ಗ್ರಾಹಕರನ್ನು ಅಕರ್ಷಿಸಲು ಚಿನ್ನ, ಹರಳು, ವಜ್ರಾಭರಣಗಳ ಮೇಲೆ ಒಂದಷ್ಟು ರಿಯಾಯಿತಿ, ಮೇಕಿಂಗ್‌ ಶುಲ್ಕದ ಮೇಲೆ ಕಡಿತ ಇತ್ಯಾದಿ ಕೊಡುಗೆಗಳನ್ನು ಘೋಷಿಸಿದ್ದವು.

ಅಕ್ಷಯ ತೃತೀಯಾದಂದು ಚಿನ್ನ ಖರೀದಿಸಿದರೆ ಸಂಪತ್ತು ಅಕ್ಷಯವಾಗುವುದು ಎಂಬ ನಂಬಿಕೆ ಸಮಾಜದಲ್ಲಿದೆ. ಮುಖ್ಯವಾಗಿ ಮಹಿಳೆಯರು ಚಿನ್ನ ಖರೀದಿಗೆ ಈ ದಿನವನ್ನೇ ಆಯ್ಕೆ ಮಾಡುತ್ತಾರೆ.

ಎಸ್‌.ಎಲ್‌. ಶೇಟ್‌ ಜುವೆಲರ್
ಆ್ಯಂಡ್‌ ಡೈಮಂಡ್‌ ಹೌಸ್‌
ಈ ಬಾರಿಯ ಅಕ್ಷಯ ತೃತೀಯಾದಂದು ನಿರೀಕ್ಷೆಯಂತೆ ನಮ್ಮಲ್ಲಿಯೂ ಉತ್ತಮ ಖರೀದಿ ನಡೆಯುತ್ತಿದೆ. ಕಳೆದ ಒಂದು ವಾರದಲ್ಲಿ ಬುಕ್ಕಿಂಗ್‌ ಕೂಡ ಉತ್ತಮವಾಗಿತ್ತು. ಆ ಮೂಲಕ ಗ್ರಾಹಕರು ಅಕ್ಷಯ ತೃತೀಯಾವನ್ನು ಅರ್ಥಪೂರ್ಣವಾಗಿಸಿರುವುದು ಖುಷಿ ತಂದಿದೆ ಎಂದು ಹಂಪನಕಟ್ಟೆ ಕೆ.ಎಸ್‌. ರಾವ್‌ ರಸ್ತೆಯಲ್ಲಿರುವ ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಪ್ರಶಾಂತ್‌ ಶೇಟ್‌ ಹೇಳಿದ್ದಾರೆ.

Advertisement

ಲೇಡಿಹಿಲ್‌ನ ಎಸ್‌.ಎಲ್‌.
ಶೇಟ್‌ ಡೈಮಂಡ್‌ ಹೌಸ್‌
2010ರಲ್ಲಿ 18,300 ರೂ. ಇದ್ದ 10 ಗ್ರಾಂ ಚಿನ್ನದ ದರ 2022ರಲ್ಲಿ 53,400 ರೂ. ಆಗಿದೆ. ಹೀಗಿರುವಾಗ ಹೂಡಿಕೆ ದೃಷ್ಟಿಯಿಂದಲೂ ಚಿನ್ನ ಖರೀದಿಯು ಗ್ರಾಹಕರಿಗೆ ಸುವರ್ಣಾವಕಾಶವಾಗಿದೆ ಎಂದು ಲೇಡಿಹಿಲ್‌ನ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ ರವೀಂದ್ರ ಶೇಟ್‌ ಹೇಳುತ್ತಾರೆ.

ಜೋಯ್‌ ಆಲುಕ್ಕಾಸ್‌
ಕಳೆದ ಎರಡು ವರ್ಷವೂ ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಹೇರಿದ್ದರಿಂದ ಆಕ್ಷಯ ತೃತೀಯಾ ಸೇಲ್‌ ಇರಲಿಲ್ಲ. ಹಾಗಾಗಿ ಈ ಬಾರಿ ಸಾಕಷ್ಟು ಆಫರ್‌ಗಳೊಂದಿಗೆ ಮಾರಾಟ ನಡೆದಿದೆ. ನಿರೀಕ್ಷಿಸಿದಷ್ಟು ಸ್ಪಂದನೆ ಜನರಿಂದ ವ್ಯಕ್ತವಾಗುತ್ತಿದೆ ಎಂದು ಜೋಯ್‌ ಆಲುಕ್ಕಾಸ್‌ನ ಹರೀಶ್‌ ತಿಳಿಸಿದರು.

ಪುತ್ತೂರಿನ ಜಿ.ಎಲ್‌. ಆಚಾರ್ಯ ಜುವೆಲರ್
ಪುತ್ತೂರು: ಕರಾವಳಿ, ಮಲೆನಾಡು ಭಾಗದ ಪ್ರಸಿದ್ಧ ಆಭರಣ ಮಳಿಗೆ ಜಿ.ಎಲ್‌. ಆಚಾರ್ಯ ಜುವೆಲರ್ ಪುತ್ತೂರು, ಸುಳ್ಯ, ಹಾಸನ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ಅಕ್ಷಯ ತೃತೀಯಾ ಪ್ರಯುಕ್ತ ವಿಶೇಷ ಮುಂಗಡ ಬುಕ್ಕಿಂಗ್‌ ಆಯೋಜಿಸಿತ್ತು. ಚಿನ್ನಾಭರಣ ಮೌಲ್ಯದ ಶೇ. 50 ಮುಂಗಡ ಪಾವತಿಸಿ ಮನ ದಿಚ್ಛೆಯ ಆಭರಣಗಳನ್ನು ಕಾದಿರಿ ಸಿದ ಗ್ರಾಹಕರು ಚಿನ್ನದ ದರ ಇಳಿಕೆ ಯಿಂದ ಖುಷಿಪಟ್ಟರು. ಕಳೆದೆ ರಡು ವರ್ಷಗಳಿಂದ ಅಕ್ಷಯ ತೃತೀಯಾ ವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದ ಕಾರಣ ಈ ಬಾರಿ ಗ್ರಾಹಕರು ಹೆಚ್ಚಿನ ಉತ್ಸುಕತೆಯಿಂದ ಚಿನ್ನಾಭರಣ ಖರೀದಿಸಿದರು.

ವಾಹನ ಖರೀದಿಯೂ ಹೆಚ್ಚು
ಕೇವಲ ಆಭರಣ ಖರೀದಿ ಮಾತ್ರವಲ್ಲದೆ ಗೃಹೋಪಯೋಗಿ ವಸ್ತು ಹಾಗೂ ವಾಹನ ಖರೀದಿಗೂ ಜನ ಆಸಕ್ತಿ ತೋರುತ್ತಿದ್ದಾರೆ. ನಗರದ ಪ್ರಮುಖ ಕಾರು ಮಾರಾಟ ಮಳಿಗೆಗಳಲ್ಲಿ ಕಾರು ಡೆಲಿವರಿ ಪಡೆದುಕೊಳ್ಳುವವರ ಸಂಖ್ಯೆ ಎಂದಿಗಿಂತ ಜಾಸ್ತಿ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next