Advertisement

ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ: ಅಕ್ಷಯ್‌ ಕುಮಾರ್‌ ಕಿಡಿ; ವಿಡಿಯೋ 

03:06 PM Jan 05, 2017 | |

ಮುಂಬಯಿ: ಹೊಸವರ್ಷಾಚರಣೆಯ ರಾತ್ರಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ  ಪ್ರಕರಣವನ್ನು  ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ಕಟು ಶಬ್ಧಗಳಲ್ಲಿ ಟೀಕಿಸಿ ಕಿಡಿ ಕಾರಿದ್ದಾರೆ. ವಿಡಿಯೋ ನೋಡಿ 

Advertisement

ಟ್ವೀಟರ್‌ನಲ್ಲಿ ವಿಡಿಯೋವೊಂದರಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅಕ್ಷಯ್‌ ಕುಮಾರ್‌ ಅವರು ಮಹಿಳೆಯರಿಗೆ ಕಡಿಮೆ ಬಟ್ಟೆ ತೊಟ್ಟಿದ್ದೇಕೆ? ರಾತ್ರಿ ಮನೆಯಿಂದ ಹೊರಗೆ ಹೋಗಿದ್ದೇಕೆ  ಎಂದು ಪ್ರಶ್ನಿಸುವವ ವಿರುದ್ಧವೂ ಕಿಡಿ ಕಾರಿದ್ದಾರೆ. ನಾಚಿಕೆಯಾಗಬೇಕು ನಿಮಗೆ.. ಕಡಿಮೆಯಾದದ್ದು ಯುವತಿಯ ಬಟ್ಟೆಯಲ್ಲ ನಿಮ್ಮ ಮನಸ್ಥಿತಿ ಎಂದಿದ್ದಾರೆ. 

‘ನಾನೊಬ್ಬ ಮಗಳ ತಂದೆಯಾಗಿ ಇದನ್ನು ಖಂಡಿಸುತ್ತಿದ್ದೇನೆ, ಅಲ್ಲದಿದ್ದರೂ ನಾನು ಖಂಡಿಸುತ್ತೇನೆ. ಇಲ್ಲಿ  ಕೆಟ್ಟ ಕಾರ್ಯ ಮಾಡಿದವರು ಅನ್ಯಗೃಹದಿಂದ ಬಂದವರಲ್ಲ, ನಮ್ಮ ನಿಮ್ಮ ನಡುವೆ ಇರುವ ಜನರೆ ಮಾಡಿದ್ದಾರೆ. ಯಾವಾಗ ಈ ದೇಶದ ಹುಡುಗಿಯರು ತಿರುಗಿಬೀಳುತ್ತಾರೊ ಆವಾಗ ಇಲ್ಲಿ ನಿಮ್ಮ ತಲೆ ನೋಡಲು ಸಿಗುವುದಿಲ್ಲ’  ಎಂದಿದ್ದಾರೆ. 

ಯಾವೊಬ್ಬ ಹುಡುಗಿಯರು ಹೆದರಬೇಕಾಗಿಲ್ಲ,ಮಾರ್ಷಲ್‌ ಆರ್ಟ್‌ ಕಲಿತು  ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳಲು ಮುಂದಾಗಲು ಕರೆ ನೀಡಿದರು.

ಕುಟುಂಬದೊಂದಿಗೆ ಕ್ರಿಸ್‌ಮಸ್‌ ರಜೆ ಕಳೆಯಲು ಕೇಪ್‌ ಟೌನ್‌ ಪ್ರವಾಸಕ್ಕೆ ತೆರಳಿ ಭಾರತಕ್ಕೆ ವಾಪಾಸಾದ ಬಳಿಕ ಟಿವಿ ವಾಹಿನಗಳಲ್ಲಿ ಸುದ್ದಿ ವೀಕ್ಷಿಸಿ ಅಕ್ಷಯ್‌ ಕುಮಾರ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next