Advertisement

ಕಾಂಗ್ರೆಸ್‌ನಿಂದ ಪೌರತ್ವ ಕಾಯ್ದೆ ಗೊಂದಲ ಸೃಷ್ಟಿ

01:41 PM Jan 09, 2020 | |

ಅಕ್ಕಿಆಲೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಕಾಂಗ್ರೆಸ್‌ ಮುಸ್ಲಿಮರಲ್ಲಿ ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ತಾಲೂಕು ಬಿಜೆಪಿ ಸಂಚಾಲಕ ಡಾ| ಸುನೀಲ ಹಿರೇಮಠ ಹೇಳಿದರು.

Advertisement

ತಿಳವಳ್ಳಿ ಗ್ರಾಮದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಕಾಯಿದೆಯ ತಿದ್ದುಪಡಿಯಿಂದಾಗಿ ದೇಶದ ಯಾರೊಬ್ಬರಿಗೂ ತೊಂದರೆ ಯಾಗುವುದಿಲ್ಲ. ಈ ಕುರಿತು ಕಾಂಗ್ರೆಸ್‌ ವಿನಾಕಾರಣ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಜನರ ದಿಕ್ಕು ತಪ್ಪಿಸಿ ತನ್ನ ರಾಜಕೀಯದ ಬೆಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್‌ ನಾಯಕರ ಮಾತಿಗೆ ಯಾರೂ ಕಿವಿಗೊಡಬಾರದು. ಈ ಹಿಂದೆಯೂ ದೇಶದ ಪ್ರಧಾನಿಗಳಾಗಿದ್ದ ಜವಾಹರ್‌ ಲಾಲ್‌ ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿಯವರು ಈ ಕಾಯ್ದೆ ಜಾರಿಗೆ ತಂದಿದ್ದರು. ಆದರೆ, ಯಾವುದೇ ರೀತಿಯ ವಿರೋಧವೂ ವ್ಯಕ್ತವಾಗಿರಲಿಲ್ಲ. ದೇಶದಲ್ಲಿ ಉಂಟಾಗಿರುವ ಗೊಂದಲಗಳನ್ನು ಸರಿಪಡಿಸುವ ಉದ್ದೇಶದಿಂದ ಬಿಜೆಪಿ ಮನೆ-ಮನೆಗೆ ತೆರಳಿ ಕಾಯಿದೆ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದರು.

ಮುಖಂಡರಾದ ಶಿವಲಿಂಗಪ್ಪ ತಲ್ಲೂರು ಮಾತನಾಡಿ, ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರಲ್ಲಿ ವಾಸ್ತವ ಸಂಗತಿಗಳನ್ನು ತಿರುಚಿ ಹೇಳುತ್ತಿದೆ. ಕಾಯಿದೆ ದೇಶದ ವಾಸಿಗಳಿಗೆ
ಯಾವುದೇ ರೀತಿಯಲ್ಲಿ ತೊಂದರೆ ಮಾಡದು ಎಂದರು.

ನಿಂಗಪ್ಪ ಗೊಬ್ಬೇರ, ಅಪ್ಪು ಶೆಟ್ಟರ, ಪರಶುರಾಮ ಗೌಳಿ,
ಭರಮಣ್ಣ ಕುರುಬರ, ಶಿವಯೋಗಿ ವಡೆಯರ, ದಯಾನಂದ ಹಾವೇರಿ, ಮಾರುತಿ ಈಳಗೇರ, ಕುಮಾರ ಲಕ್ಮೋಜಿ, ಸುನೀಲ ಬಾರ್ಕಿ, ಗಿರೀಶ ಸಜ್ಜನಶೆಟ್ಟರ, ಮಧುಕರ ಹುನಗುಂದ, ನಿಂಬಣ್ಣ ಜಾಡರ, ಚೌಡಪ್ಪ ಶಿರಿಹಳ್ಳಿ, ಪರಶುರಾಮ ಸವಣೂರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next