ಅಹ್ಮದಾಬಾದ್: ಮೊದಲ ಪಂದ್ಯದಲ್ಲಿ ಹಿನ್ನಡೆಯಾದದ್ದು ನಿಜ, ಆದರೆ ದ್ವಿತೀಯ ಮುಖಾಮುಖಿ ಯಲ್ಲಿ ನೈಜ ಸಾಮರ್ಥ್ಯದೊಂದಿಗೆ ಸರಣಿ ಸಮಗೊಳಿಸಲು ನಮ್ಮ ಪ್ರಯತ್ನ ಸಾಗಲಿದೆ ಎಂಬುದಾಗಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಅಖೀಲ್ ಹೊಸೇನ್ ಹೇಳಿದ್ದಾರೆ.
“ನಿಜ, ಐಪಿಎಲ್ ಸದ್ಯದಲ್ಲೇ ಆರಂಭವಾಗಲಿದೆ. ಮೆಗಾ ಹರಾಜು ನಡೆಯಲಿಕ್ಕಿದೆ. ಆದರೆ ನಮ್ಮ ಗಮನವಿರುವುದು ಮುಂದಿನೆರಡು ಏಕದಿನ ಪಂದ್ಯಗಳ ಮೇಲೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್, ಪಾಟ್ನಾ ಪೈರೇಟ್ಸ್ ಗೆಲುವಿನ ಆಟ
ನಮಗೆ ಇವು ಬಹಳ ಮುಖ್ಯ ಪಂದ್ಯಗಳು. ದ್ವಿತೀಯ ಪಂದ್ಯ ಗೆದ್ದರೆ ಸರಣಿ ಗೆಲುವಿಗೆ ಗರಿಷ್ಠ ಪ್ರಯತ್ನ ಮಾಡಲಿದ್ದೇವೆ. ಭಾರತದಲ್ಲಿ ಭಾರತವನ್ನು ಸೋಲಿಸುವುದಕ್ಕಿಂತ ಮಿಗಿಲಾದುದು ಬೇರೊಂದಿಲ್ಲ’ ಎಂಬುದಾಗಿ ಅಖೀಲ್ ಹೊಸೇನ್ ಹೇಳಿದರು.
ಅಖೀಲ್ ಕಳೆದ ವರ್ಷದ ದ್ವಿತೀಯಾರ್ಧದ ಐಪಿಎಲ್ ವೇಳೆ ಕೆಕೆಆರ್‌ನ ನೆಟ್ ಬೌಲರ್ ಆಗಿದ್ದರು.