ನವದೆಹಲಿ: ಉದ್ಯಮಿ ರಾಕೇಶ್ ಜುಂಜುನ್ವಾಲಾ ಒಡೆತನದ “ಆಕಾಶ್ ಏರ್‌ಲೈನ್’ ಇದೇ ತಿಂಗಳ ಅಂತ್ಯದಲ್ಲಿ ಹಾರಾಟಕ್ಕೆ ಸಿದ್ಧವಾಗಿದ್ದು, ಪೂರ್ವ ತಯಾರಿಯಾಗಿ ಸಂಸ್ಥೆಯ ಸಿಬ್ಬಂದಿಯ ಸಮವಸ್ತ್ರದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಸಂಸ್ಥೆಯು ಸ್ನಿಕರ್ಸ್, ಕೋಟ್ ಅನ್ನು ಸಮವಸ್ತ್ರದಲ್ಲಿ ಪರಿಚಯಿಸಿದ್ದು, ಈ ರೀತಿ ಸಮವಸ್ತ್ರ ಪರಿಚಯಿಸಿದ ಮೊದಲ ಏರ್‌ಲೈನ್ ಆಗಿ ಹೊರಹೊಮ್ಮಿದೆ.
“ನಮಗೆ ನಮ್ಮ ಸಿಬ್ಬಂದಿಯ ಅರಾಮ ಮತ್ತು ಪರಿಸರ ಮುಖ್ಯ. ಹಾಗಾಗಿ ಅವರಿಗೆ ಕೆಲಸಕ್ಕೆ ಸುಲಭವೆನಿಸುವ ಹಾಗೂ ಖುಷಿಕೊಡುವ ಸಮವಸ್ತ್ರವನ್ನು ತಯಾರಿಸಿದ್ದೇವೆ. ಇದು ಸಮುದ್ರ ತ್ಯಾಜ್ಯದಿಂದ ಸಂಗ್ರಹಿಸಿದ ಪೆಟ್ ಬಾಟೆಲ್ ಪ್ಲಾಸ್ಟಿಕ್‌ನಿಂದ ಮರುಬಳಕೆ ಮಾಡಲಾದ ಪಾಲಿಸ್ಟರ್‌ನಿಂದ ತಯಾರಿಸಲಾಗಿದೆ.
ಸ್ನಿಕರ್ಸ್‌ನ ಲೇಸ್‌ನಲ್ಲೂ ಪ್ಲಾಸ್ಟಿಕ್ ಬಳಸದೆ, ರಬ್ಬರ್ ಬಳಸಿದ್ದೇವೆ’ ಎಂದು ಸಂಸ್ಥೆ ಹೇಳಿದೆ.