Advertisement

ಎನ್‌ಎಸ್‌ಎ : 2ನೇ ಅವಧಿಗೆ ಅಜಿತ್‌ ದೋವಾಲ್‌ ನೇಮಕ; ಕ್ಯಾಬಿನೆಟ್‌ ಸಚಿವ ದರ್ಜೆ

08:38 AM Jun 04, 2019 | Sathish malya |

ಹೊಸದಿಲ್ಲಿ : ಅಜಿತ್‌ ದೋವಾಲ್‌ ಅವರನ್ನು ಎರಡನೇ ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ (ಎನ್‌ಎಸ್‌ಎ) ನೇಮಿಸಲಾಗಿದೆ ಮತ್ತು ಅವರ ಹುದ್ದೆಯನ್ನು ಕ್ಯಾಬಿನೆಟ್‌ ಸಚಿವ ದರ್ಜೆಗೆ ಏರಿಸಲಾಗಿದೆ.

Advertisement

ಕ್ಯಾಬಿನೆಟ್‌ ನೇಮಕಾತಿ ಸಮಿತಿಯು 2019ರ ಮೇ 31ರಿಂದ ಅನ್ವಯವಾಗುವಂತೆ ದೋವಾಲ್‌ ಅವರನ್ನು ಐದು ವರ್ಷಗಳ ಅವಧಿಗೆ ನೇಮಕ ಮಾಡಿದೆ ಮತ್ತು ಪ್ರಧಾನಿಯವರ ಅವಧಿಯೊಂದಿಗೇ ಅದು ಮುಗಿಯಲಿದೆ ಎಂದು ಸಮಿತಿ ಹೇಳಿದೆ.

ದೋವಾಲ್‌ ಅವರನ್ನು 2014ರ ಮೇ ತಿಂಗಳಲ್ಲಿ ಕೇಂದ್ರ ಸಹಾಯಕ ಸಚಿವ ಮಟ್ಟದಲ್ಲಿ ಐದನೇ ಎನ್‌ಎಸ್‌ಎ ಆಗಿ ನೇಮಿಸಲಾಗಿತ್ತು. ಈ ಹುದ್ದೆಯಲ್ಲಿ ಎರಡನೇ ಅವಧಿಯನ್ನು ಪಡೆಯುವಲ್ಲಿ ಅವರು ಮೊದಲಿಗರಾಗಿದ್ದಾರೆ.

ದೋವಾಲ್‌ ಅವರು ಕಳೆದ ತಮ್ಮ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ. ಪುಲ್ವಾಮಾ ಉಗ್ರ ದಾಳಿಯನ್ನು ಅನುಸರಿಸಿ ನಡೆದ ಬಾಲಾಕೋಟ್‌ ಮೇಲಿನ ಐಎಎಫ್ ದಾಳಿ ಮತ್ತು ಸರ್ಜಿಕಲ್‌ ಸ್ಟ್ರೈಕ್‌ ಗಳಲ್ಲಿ ದೋವಾಲ್‌ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next