ನವಿಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಕೊರªಬ್ಬು ಬಾರಗ ಯಕ್ಷಗಾನ ಪ್ರದರ್ಶನ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ಅ.24 ರಂದು ಐರೋಲಿಯ ಹೆಗ್ಗಡೆ ಭವನದಲ್ಲಿ ನಡೆಯಿತು.
ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಬಿ. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾಪೋಷಕರಾದ ಬಂಟರ ಸಂಘ ಮುಂಬಯಿ ಇದರ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಮತ್ತು ಉದ್ಯಮಿ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಇವರನ್ನು ಗೌರವಿಸಲಾಯಿತು.
ನೆರೂಲ್ ಶ್ರೀ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಹಿರಿಯ ರಂಗಕರ್ಮಿ ವಿ. ಕೆ. ಸುವರ್ಣ ಮತ್ತು ಕಲಾವಿದ-ಕಲಾಪೋಷಕ ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಅಜೆಕಾರು ಬಾಲಕೃಷ್ಣ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಜೊತೆ ಕೋಶಾಧಿಕಾರಿ ಚಂದ್ರಶೇಖರ್ ಎಸ್. ಶೆಟ್ಟಿ, ಕನ್ನಡ ಸಂಘ ವರ್ತಕ್‌ನಗರ ಥಾಣೆ ಅಧ್ಯಕ್ಷ ಜಯಂತ್ ಎನ್. ಶೆಟ್ಟಿ, ನವಿಮುಂಬಯಿ ಹೊಟೇಲ್ ಓನರ್ ಅಸೋಸಿಯೇಶನ್ ಅಧ್ಯಕ್ಷ ದಯಾನಂದ ಶೆಟ್ಟಿ, ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಕನ್ನಡ ಸಂಘ ಬಾಲ್ಕುಮ್ ಥಾಣೆ ಅಧ್ಯಕ್ಷ ಮನೋಜ್‌ಕುಮಾರ್ ಎಲ್. ಹೆಗ್ಡೆ, ಅಯ್ಯಪ್ಪ ಭಕ್ತ ಮಂಡಳಿ ಚಾರಿಟೆಬಲ್ ಟ್ರಸ್ಟ್ ನೆರೂಲ್ ಉಪಾಧ್ಯಕ್ಷ ಪ್ರಭಾಕರ ಎಸ್. ಹೆಗ್ಡೆ, ರಾಜಲಕ್ಷ್ಮಿ ಹಾಸ್ಪಿಟಾಲಿಟಿ ರಸಾಯನಿ ಆಡಳಿತ ನಿರ್ದೇಶಕ ಚಂದ್ರಶೇಖರ ಶೆಟ್ಟಿ
ಕುಕ್ಕುಂದೂರು, ಉದ್ಯಮಿಗಳಾದ ಮೇಘರಾಜ್ ಶೆಟ್ಟಿ ಸಾನಾ³ಡಾ, ನವಿಮುಂಬಯಿ ಶಿವಾಜಿ ಶೆಟ್ಟಿ. ರಾಘವೇಂದ್ರ ಎಂಟರ್‌ಪ್ರೈಸಸ್ ಘನ್ಸೋಲಿ ಮಾಲಕ ರಾಜೇಂದ್ರ ಎಸ್. ಶೆಟ್ಟಿ, ಉದ್ಯಮಿ ಆನಂದ ಬಂಗೇರ ಬಜ್ಪೆ, ರಂಗನಟ, ನಿರ್ದೇಶಕ ಅನಿಲ್ ಕುಮಾರ್ ಹೆಗ್ಡೆ ಪೆರ್ಡೂರು, ರಂಗನಟ ರವಿ ಎಸ್. ಹೆಗ್ಡೆ ಹೆರ್ಮುಂಡೆ ಮೊದಲಾದವರು ಉಪಸ್ಥಿತರಿದ್ದರು.