ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇತ್ತೀಚೆಗಷ್ಟೇ ಫೋಟೋಗೆ ಪೋಸ್ ನೀಡಿದ್ದ ಕನ್ನಡತಿ, ಸೋಷಿಯಲ್ ಮೀಡಿಯಾ ಅಯ್ಯೋ ಶ್ರದ್ಧಾ, ಈಗ ಬ್ರಿಟನ್ ಹಣಕಾಸು ಸಚಿವ ಜೆರೆಮಿ ಹಂಟ್ ಜತೆಗೆ ಕಾಣಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಜೆರೆಮಿ ಜತೆಗೆ ಕೂತು ಮಸಾಲೆ ದೋಸೆ ಕೂಡ ಸವಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜೆರೆಮಿ ಜತೆಗಿನ ಶ್ರದ್ಧಾ ಫೋಟೋ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಶ್ರದ್ಧಾ ಜೆರೆಮಿ ಅವರನ್ನು ಭೇಟಿಯಾಗಿ ಕೆಲ ಪ್ರಶ್ನೆಗಳನ್ನು ಕೂಡ ಕೇಳಿದ್ದಾರಂತೆ. ಈ ಫೋಟೋಗಳನ್ನು ಬ್ರಿಟನ್ ಹಣಕಾಸು ಸಚಿವಾಲಯದ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಶ್ರದ್ಧಾ, ಜೆರೆಮಿ ಅವರಿಗೆ ಭಾರತ-ಬ್ರಿಟನ್ ಸಂಬಂಧದ ಬಗ್ಗೆ ಪ್ರಶ್ನೆ ಕೇಳುವುದರ ಜೊತೆಗೆ, “ದೋಸೆ ತಿನ್ನೋದಕ್ಕೆ ಕಷ್ಟವಾಗುತ್ತಿದೆಯಾ’ ಎಂದೂ ಪ್ರಶ್ನಿಸಿದ್ದಾರೆ. ಎಲ್ಲ ಪ್ರಶ್ನೋತ್ತರಗಳು ಶೀಘ್ರವೇ ನಿಮ್ಮ ಮುಂದೆ ಬರಲಿದೆ ಎಂದು ಸಚಿವಾಲಯ ಕ್ಯಾಪ್ಶನ್‌ನಲ್ಲಿ ತಿಳಿಸಿದೆ.