Advertisement

Air India ಕಟ್ಟಡಕ್ಕೆ ಈಗ ಮಹಾ ಸರಕಾರ ಮಾಲಕ! :1,601 ಕೋಟಿ ರೂ.ಗೆ ಖರೀದಿ

01:16 AM Mar 15, 2024 | Team Udayavani |

ಮುಂಬಯಿ: ಮುಂಬಯಿನಲ್ಲಿರುವ ಪ್ರಖ್ಯಾತ ಏರ್‌ ಇಂಡಿಯಾ ಕಟ್ಟಡವನ್ನು ಮಹಾರಾಷ್ಟ್ರ ಸರಕಾರ‌ 1,601 ಕೋಟಿ ರೂ.ಗೆ ಖರೀದಿಸಿದೆ.

Advertisement

ನಾರಿಮನ್‌ ಪಾಯಿಂಟ್‌ನಲ್ಲಿರುವ ಈ ಏರ್‌ ಇಂಡಿಯಾ ಕಟ್ಟಡವು ಇದಕ್ಕೂ ಮುನ್ನ ಎಐ ಅಸೆಟ್ಸ್‌ ಹೋಲ್ಡಿಂಗ್‌ ಕಂಪೆನಿ ಲಿ.(ಎಐಎಎಚ್‌ಎಲ್‌) ಸುಪ­ರ್ದಿ­ಯಲ್ಲಿತ್ತು. ಗುರುವಾರ ಕೇಂದ್ರ ಸರಕಾರ‌ವು ಕಟ್ಟಡದ ಆಸ್ತಿ ಮಾಲಕತ್ವವನ್ನು ಎಐಎಎಚ್‌ಎಲ್‌ನಿಂದ ಮಹಾ­­­­­­­ರಾಷ್ಟ್ರ ಸರಕಾರ‌ಕ್ಕೆ ವರ್ಗಾಯಿಸಿದೆ.

ಜೆ.ಆರ್‌.ಡಿ. ಟಾಟಾ ಅವರ ಕನಸಿಗೆ ಅನುಗುಣವಾಗಿ ನ್ಯೂಯಾರ್ಕ್‌ ಮೂಲದ ವಾಸ್ತುಶಿಲ್ಪಿ ಜಾನ್‌ ಬರ್ಗಿ ಅವರು ಈ ಕಟ್ಟಡವನ್ನು ವಿನ್ಯಾಸ­ಗೊಳಿಸಿದ್ದರು. 1970ರಲ್ಲಿ ಕಟ್ಟಡ ನಿರ್ಮಿಸಲಾಯಿತು. ಈ ಕಟ್ಟಡವು ಆಗಿನ ಕಾಲದಲ್ಲಿ ಎಲಿವೇಟರ್‌ಗಳು, ನಿಯಾನ್‌ ಸಂಕೇತದ ಬೋರ್ಡ್‌ಗಳು, ಎರಡು ಹಂತದ ನೆಲಮಹಡಿ ಪಾರ್ಕಿಂಗ್‌ ವ್ಯವಸ್ಥೆ ಹೊಂದಿದ್ದ ದೇಶದ ಮೊದಲ 23 ಅಂತಸ್ತಿನ ಕಟ್ಟಡವಾಗಿತ್ತು.

ಏರ್‌ ಇಂಡಿಯಾದ ಆಸ್ತಿಗಳು, ಸಾಲದ ಮೇಲ್ವಿಚಾರಣೆಗಾಗಿ ಎಐಎ ಎಚ್‌ಎಲ್‌ ಅನ್ನು ಸ್ಥಾಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next