Advertisement
ಖಾಸಗಿಗೆ ಮಾರಾಟ ಯಾಕೆ?ಏರ್ ಇಂಡಿಯಾ ಕಂಪೆನಿಯು ನಷ್ಟ ಅನುಭವಿಸುತ್ತಿರುವುದೇ ಮಾರಾಟಕ್ಕೆ ಪ್ರಮುಖ ಕಾರಣ. ಕಂಪೆನಿಯು ಒಟ್ಟಾರೆ 62 ಸಾವಿರ ಕೋ.ರೂ.ಗಳ ನಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಸರಕಾರ ಇದನ್ನು ಮಾರಾಟ ಮಾಡಲು ತೀರ್ಮಾನಿಸಿದೆ. 2018ರಲ್ಲಿಯೇ ಕೇಂದ್ರ ಸರಕಾರ ಏರ್ ಇಂಡಿಯಾದ ಮಾರಾಟಕ್ಕೆ ಪ್ರಯತ್ನಿಸಿತ್ತಾದರೂ ಖರೀದಿಸಲು ಯಾರೂ ಮುಂದೆ ಬಂದಿರಲಿಲ್ಲ.
ಈ ಬಾರಿ ಸರಕಾರ ಕಂಪೆನಿಯ ಶೇ. 100ರಷ್ಟು ಪಾಲನ್ನು ಹರಾಜು ಹಾಕುತ್ತಿದೆ. ಅಂದರೆ ಕಂಪೆನಿಯ ಯಾವುದೇ ಷೇರುಗಳು ಸರಕಾರದ ಬಳಿ ಉಳಿಯುವುದಿಲ್ಲ. ಕಂಪೆನಿಯ 60 ಸಾವಿರ ಕೋ. ರೂ. ಗಳಿಗೂ ಹೆಚ್ಚಿನ ಸಾಲದಲ್ಲಿ, ಖರೀದಿದಾರರು ಕೇವಲ 23,286 ಕೋ. ರೂ. ಗಳನ್ನು ಮಾತ್ರ ಮರುಪಾವತಿಸಬೇಕಾಗುತ್ತದೆ. ಉಳಿದ ಸಾಲವನ್ನು ಸರಕಾರ ಮರುಪಾವತಿ ಮಾಡುತ್ತದೆ. ಹರಾಜಿನಲ್ಲಿ ಭಾಗವಹಿಸುವ ಕಂಪೆನಿಯ ನಿವ್ವಳ ಮೌಲ್ಯ 3 ಸಾವಿರ ಕೋ. ರೂ. ಆಗಿರಬೇಕು. 2018ರಲ್ಲಿ ಅದು 5 ಸಾವಿರ ಕೋ. ರೂ. ಇತ್ತು. ಸ್ಪೈಸ್ ಜೆಟ್ ಬಿಕ್ಕಟ್ಟಿನ ಮಧ್ಯೆ ಖರೀದಿಗೆ ಮುಂದು?
ಖರೀದಿಗೆ ಆಸಕ್ತಿ ತೋರಿರುವ ಸ್ಪೈಸ್‌ಜೆಟ್ ಸೆಪ್ಟಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಸ್ಪೈಸ್‌ಜೆಟ್ 113 ಕೋ. ರೂ. ನಷ್ಟದಲ್ಲಿತ್ತು. ಅಂತಹ ಪರಿಸ್ಥಿತಿಯಲ್ಲಿ ಏರ್ ಇಂಡಿಯಾ ಖರೀದಿಸಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.
Related Articles
ಹರಾಜಿನಲ್ಲಿ ಗೆದ್ದರೆ 67 ವರ್ಷಗಳ ಬಳಿಕ ಏರ್ ಇಂಡಿಯಾದ ಕಾರ್ಯಾಚರಣೆ ಮತ್ತೆ ಟಾಟಾ ಸಂಸ್ಥೆಗೆ ಹಿಂದಿರುಗಿದಂತಾಗುತ್ತದೆ. 1932ರಲ್ಲಿ ಟಾಟಾ ಸಮೂಹವೇ ಏರ್ ಇಂಡಿಯಾವನ್ನು ಪ್ರಾರಂಭಿಸಿತ್ತು (ಆಗ ಟಾಟಾ ಏರ್‌ಲೈನ್ಸ್). 1953ರಲ್ಲಿ ಸರಕಾರವು ಅದರ ನಿಯಂತ್ರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದೀಗ ಟಾಟಾ ಸಮೂಹ ಮತ್ತೆ ಏರ್ ಇಂಡಿಯಾ ಖರೀದಿಗೆ ಆಸಕ್ತಿ ತೋರಿದೆ. ಟಾಟಾ ಏಕಾಂಗಿಯಾಗಿ ಅಥವಾ ಯಾವುದೇ ವಿಮಾನಯಾನ ಸಂಸ್ಥೆಗಳ ಜತೆ ಸೇರಿ ಬಿಡ್ ಮಾಡಿದೆಯೇ ಎಂಬ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಟಾಟಾ ಸಮೂಹ ವಿಸ್ತಾರ ಮತ್ತು ಏರ್ ಏಷ್ಯಾ ಇಂಡಿಯಾ ಎಂಬ ಎರಡು ವಿಮಾನಯಾನ ಸಂಸ್ಥೆಗಳನ್ನು ಹೊಂದಿದೆ. ಸದ್ಯ ಏರ್‌ಏಷ್ಯಾ ಇಂಡಿಯಾ ಸಂಸ್ಥೆಯ ಮೂಲಕ ಸರಕಾರಿ ವಿಮಾನ ಸಂಸ್ಥೆ ಖರೀದಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ.
Advertisement
ಖರೀದಿಯ ಅನಂತರದ ಷರತ್ತುಗಳೇನು?125 ವಿಮಾನಗಳ ಏರ್ ಇಂಡಿಯಾ ಖರೀದಿಸುವ ಸಂಸ್ಥೆಗಳು ಅದೇ ಹೆಸರಿನೊಂದಿಗೆ ಸೇವೆಯನ್ನು ಮುಂದು ವರಿಸ ಬೇಕಾಗುತ್ತದೆ. ಹೆಸರನ್ನು ಎಷ್ಟು ಸಮಯದ ವರೆಗೆ ಬದಲಾಯಿಸಬಾರದು ಎಂದು ಹರಾಜಿನ ಮೊದಲ ವಿನಂತಿಯ ಪ್ರಸ್ತಾವದಲ್ಲಿ ಉÇÉೇಖೀಸಲಾಗುತ್ತದೆ. ಏರ್ ಇಂಡಿಯಾದ ದಿಲ್ಲಿಯಲ್ಲಿನ ಕಾರ್ಪೊರೇಟ್ ಕಚೇರಿ ಮತ್ತು ಮುಂಬಯಿಯಲ್ಲಿರುವ ಪ್ರಧಾನ ಕಚೇರಿ ಕಟ್ಟಡಗಳು ಹರಾಜಿನಲ್ಲಿ ಸೇರಿರುವುದಿಲ್ಲ. ಬಿಡ್ಡಿಂಗ್ ಕಂಪೆನಿಗಳ ಅಂತಿಮ ಪಟ್ಟಿ ಯಾವಾಗ?
ಇಒಐ ಸಲ್ಲಿಸಿದ ಕಂಪೆನಿಗಳು ಈಗಾಗಲೇ ತಮ್ಮ ಭೌತಿಕ ಬಿಡ್‌ಗಳನ್ನು ಸಲ್ಲಿಸಿವೆ. ಸರಕಾರವು ಅವರಲ್ಲಿ ಅರ್ಹ ಕಂಪೆನಿಗಳ ಪಟ್ಟಿಯನ್ನು ಜ. 5ರೊಳಗೆ ಬಿಡುಗಡೆ ಮಾಡ ಲಿದೆ. ಅಮೆರಿಕದ ಇಂಟರ್‌ಅಪ್ ಇಂಕ್ ಸಂಸ್ಥೆ ಖರೀದಿಗೆ ಆರಂಭದಲ್ಲಿ ಆಸಕ್ತಿ ವಹಿಸಿದ್ದರೂ ಬಳಿಕ ಹಿಂದೆ ಸರಿದಿದೆ. ಡಿ. 29ರಂದು ಖರೀದಿ ಉತ್ಸಾಹ ತೋರಿಸಲು ಕಡೆಯ ದಿನವಾಗಿತ್ತು. ಈ ಸಂದರ್ಭ ಯುಎಸ್ ಮೂಲದ ಫಂಡ್ ಇಂಟರ್‌ಅಪ್ ಇಂಕ್ ಹಿಂದೆ ಸರಿದಿದೆ. ಆದರೆ ಖರೀದಿಗೆ ಉತ್ಸಾಹ ತೋರಿಸಿರುವ ಏರ್‌ಇಂಡಿಯಾ ಉದ್ಯೋಗಿಗಳ ಬಿಡ್ ಅನ್ನು ಬೆಂಬಲಿಸಲು ಅದು ಪ್ರಸ್ತಾವಿಸಿದೆ. ಏರ್ ಇಂಡಿಯಾ ನೌಕರರು ತಮ್ಮ ಭೌತಿಕ ಬಿಡ್ ಅನ್ನು ಈಗಾಗಲೇ ಸಲ್ಲಿಸಿದ್ದಾರೆ.