ನವದೆಹಲಿ:ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯಂತಹ ಗಣ್ಯ ವ್ಯಕ್ತಿಗಳು ಪ್ರಯಾಣಿಸುವ ವಿಶೇಷ ಬಿ 777 ವಿಮಾನ ಅಮೆರಿಕದಿಂದ ದೆಹಲಿಗೆ ಗುರುವಾರ (ಅಕ್ಟೋಬರ್ 01, 2020) ಬಂದಿಳಿದಿದೆ.
ಈ ಅತ್ಯಾಧುನಿಕ ವಿವಿಐಪಿ ವಿಮಾನ ಆಗಸ್ಟ್ ತಿಂಗಳಿನಲ್ಲಿಯೇ ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ ಕೋವಿಡ್ 19 ಸೋಂಕಿನಿಂದಾಗಿ ವಿಮಾನ ಸರಬರಾಜು ಮಾಡುವುದು ವಿಳಂಬವಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಬೋಯಿಂಗ್ ಕಂಪನಿಯಿಂದ ವಿಮಾನ ಪಡೆಯಲು ಭಾರತದಿಂದ ಹಿರಿಯ ಅಧಿಕಾರಿಗಳು ಆಗಸ್ಟ್ ಮೊದಲ ವಾರದಲ್ಲಿ ಅಮೆರಿಕಕ್ಕೆ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಈ ವಿಮಾನ ಪ್ರಧಾನಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಪ್ರವಾಸಕ್ಕೆ ಏರ್ ಇಂಡಿಯಾದ ವಿಶೇಷ ಬಿ 777 ವಿಮಾನಗಳು ಬಳಕೆಯಾಗುತ್ತಿವೆ. ಬಿ 777 ಬೋಯಿಂಗ್ ವಿಮಾನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹೊಂದಿದೆ. ಕ್ಷಿಪಣಿ ನಿರೋಧಕ ತಂತ್ರಜ್ಞಾನ ಮತ್ತು ಸ್ವಯಂ ರಕ್ಷಣಾ ಸೂಟ್ ಇದರಲ್ಲಿ ಸೇರಿದೆ.
Related Articles
ಈ ಅತ್ಯಾಧುನಿಕ ಬಿ 777 ವಿಮಾನದ ಬೆಲೆ 190 ದಶಲಕ್ಷ ಡಾಲರ್ (ಸುಮಾರು 14 ಸಾವಿರ ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.