ನವದೆಹಲಿ: ಸುರಕ್ಷತಾ ನಿರ್ವಹಣೆಯನ್ನು ಹೆಚ್ಚಿಸಲು ಮತ್ತು ವಿಮಾನದ ಒಳಗಿನ ಘಟನೆಗಳ ನೈಜ ವರದಿಗಾಗಿ ಬ್ರಿಟನ್ ಮೂಲದ ಐಡಿಯಾಜನ್ಸ್ ಎಂಟಪ್ರೈಸಸ್‌ನ ಕ್ಲೌಡ್ ಸಾಫ್ಟ್ವೇರ್ ಅಪ್ಲಿಕೇಶನ್ “ಕೊರುಸನ್’ ಅನ್ನು ಬಳಸುವುದಾಗಿ ಏರ್ ಇಂಡಿಯಾ ಸೋಮವಾರ ಹೇಳಿದೆ.
ಕೆಳದ ವರ್ಷ ಎರಡು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ಈ ಕ್ರಮ ಕೈಗೊಂಡಿದೆ.
ಘಟನೆಗಳ ಸಂಬಂಧ ಕೆಲವು ದೋಷಗಳ ಹಿನ್ನೆಲೆಯಲ್ಲಿ ಡಿಜಿಸಿಎ ಏರ್ ಇಂಡಿಯಾಗೆ ದಂಡವನ್ನು ಸಹ ವಿಧಿಸಿದೆ.
ಸುರಕ್ಷತಾ ಡೇಟಾ ಸಾಫ್ಟ್ವೇರ್ ಅಪ್ಲಿಕೇಶನ್ “ಕೊರುಸನ್’ 2023ರ ಮೇ 1ರಿಂದ ಕಾರ್ಯನಿರ್ವಹಣೆ ಆರಂಭಿಸಲಿದೆ. ಇದರಿಂದ ವಿಮಾನದ ಒಳಗಿನ ಘಟನೆಗಳ ನೈಜ ವರದಿಯು ಆನ್‌ಲೈನ್ ಆಗಲಿದೆ. ಪೈಲಟ್ ಮತ್ತು ವಿಮಾನ ಸಿಬ್ಬಂದಿಗೆ ಐಪ್ಯಾಡ್‌ಗಳನ್ನು ಒದಗಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ: ಪೊಲೀಸರ ಕೈಯಿಂದ ತಪ್ಪಿಸಲೆತ್ನಿಸಿದ ಆರೋಪಿಯ ಸೆರೆ