Advertisement
ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದು ದಶಕಗಳ ಹಿಂದೆ ನಡೆದ ಮಂಗಳೂರು ವಿಮಾನ ದುರಂತವನ್ನು ನೆನಪಿಸಿದೆ.
Related Articles
ಭಾರೀ ಮಳೆಯಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಈ ವಿಮಾನವು ರಾತ್ರಿ 7.38ಕ್ಕೆ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಈ ಸಮಯದಲ್ಲಿ ಭಾರಿ ಮಳೆಯಾಗುತ್ತಿತ್ತು. ಈ ಮಧ್ಯೆ ಲ್ಯಾಂಡ್ ಆದ ವಿಮಾನ ರನ್‌ವೇಗೆ ತಲುಪಿದ ಕೆಲವೇ ಕ್ಷಣದಲ್ಲಿ ರನ್ ವೇ ಇಂದ ಜಾರಿದೆ. ಬಳಿಕ ಇದು 30 ಅಡಿ ಆಳದಕ್ಕೆ ತಳ್ಳಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
Advertisement
ಇದನ್ನೂ ಓದಿ: ಕಲ್ಲಿಕೋಟೆ: ರನ್ ವೇನಿಂದ ಜಾರಿ ಕಮರಿಗೆ ಉರುಳಿದ ವಿಮಾನ ; ಪೈಲಟ್ ಸಹಿತ 14 ಸಾವು
ಮಂಗಳೂರಿನಲ್ಲೂ ಇದೇ ಆಗಿತ್ತುಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಬೆಳಗ್ಗೆ 6.15ಕ್ಕೆ ನಡೆದ ವಿಮಾನ ಅಪಘಾತಕ್ಕೆ ಸರಿ ಸಮಾನಾಗಿ ಈ ದುರಂತವನ್ನು ಪರಿಗಣಿಸಲಾಗುತ್ತದೆ. ಪೈಲಟ್, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಈ ದುರ್ಘಟನೆಯಲ್ಲಿ 8 ಮಂದಿ ಬದುಕುಳಿದಿದ್ದರು. ಕ್ಯಾಲಿಕಟ್‌ನಂತೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ವಿಮಾನ ದುರಂತಕ್ಕೀಡಾಗಿತ್ತು. ರನ್‌ವೇಗೆ ಇಳಿದ ವಿಮಾನ ಸ್ವಲ್ಪ ದೂರ ಕ್ರಮಿಸಿ ನೋಡುತ್ತಿದ್ದಂತೆಯೇ ವಿಮಾನ ಎರಡು ತುಂಡಾಗಿ ಹೊತ್ತಿ ಉರಿದಿತ್ತು.