ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಲ್ಲಿಸಿರುವ ಬಿಡ್ ಗೆ ಅನುಮೋದನೆ ದೊರಕುವ ಸಾಧ್ಯತೆ ಇದ್ದಿರುವುದಾಗಿ ಬ್ಲೂಮ್ ಬರ್ಗ್ ಶುಕ್ರವಾರ(ಅಕ್ಟೋಬರ್ 01) ವರದಿ ಮಾಡಿದೆ.
ಇದನ್ನೂ ಓದಿ:ಮೂವರು ಮೋದಿಗಳು ದೇಶವನ್ನು ಕೊಳ್ಳೆ ಹೊಡೆದಿದ್ದಾರೆ; ಇಬ್ಬರು ಓಡಿ ಹೋಗಿದ್ದಾರೆ!
ಟಾಟಾ ಸನ್ಸ್ ಸಲ್ಲಿಸಿರುವ ಬಿಡ್ ಅನ್ನು ಶಿಫಾರಸು ಮಾಡಿ ಸಲ್ಲಿಸಿರುವ ಪ್ರಸ್ತಾಪವನ್ನು ಸಚಿವರ ಸಮಿತಿ ಅಧಿಕೃತವಾಗಿ ಅಂಗೀಕರಿಸಿರುವುದಾಗಿ ವರದಿ ವಿವರಿಸಿದೆ. ಏರ್ ಇಂಡಿಯಾ ಹರಾಜು ಪ್ರಕ್ರಿಯೆಯ ಬಿಡ್ ಕುರಿತಂತೆ ಟಾಟಾ ಸನ್ಸ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ರಾಯಿಟರ್ಸ್ ಗೂ ಕೂಡಾ ವಿತ್ತ ಸಚಿವಾಲಯದ ವಕ್ತಾರರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಏರ್ ಇಂಡಿಯಾ ಕೂಡಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಿಲ್ಲ. ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಖಾಸಗಿ ಸಂಸ್ಥೆಗೆ ಮಾರಾಟ ಮಾಡಲು ಉದ್ದೇಶಿಸಿತ್ತು ಎಂದು ವರದಿ ಹೇಳಿದೆ.
ಏರ್ ಇಂಡಿಯಾ ಸಂಸ್ಥೆಯಿಂದಾಗಿ ಸರ್ಕಾರಕ್ಕೆ ಪ್ರತಿದಿನ 200 ಮಿಲಿಯನ್ ನಷ್ಟು ನಷ್ಟವಾಗುತ್ತಿದ್ದು, ಇದರ ಪರಿಣಾಮ ಈವರೆಗೆ ಏರ್ ಇಂಡಿಯಾದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 60,074 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.