Advertisement

ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರಕ್ಕೆ ವಾಯುಸೇನಾ ಮುಖ್ಯಸ್ಥ ಭೇಟಿ

12:29 AM Jan 14, 2020 | Team Udayavani |

ನವದೆಹಲಿ: ರಾಜಧಾನಿ ದೆಹಲಿಯ ದಂಡು ಪ್ರದೇಶದ ಕಾರಿಯಪ್ಪ ಪೆರೇಡ್‌ ಮೈದಾನದಲ್ಲಿ ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್ (ಎನ್‌ಸಿಸಿ)ನಿಂದ ಆಯೋಜಿಸಿ ರುವ 2020ರ ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರಕ್ಕೆ ವಾಯು ಸೇನಾ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ ಪಿವಿಎಸ್‌ಎಂ, ಎವಿಎಸ್‌ಎಂ, ವಿಎಂ, ಎಡಿಸಿ, ಸಿಎಎಸ್‌ ಅವರು ಭೇಟಿ ನೀಡಿದರು.

Advertisement

ನಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಹಾಗೂ ರಾಷ್ಟ್ರೀಯ ಏಕೀಕರಣ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುವ ಈ ಪೆರೇಡ್‌ನ‌ಲ್ಲಿ ಎನ್‌ಸಿಸಿ ಎಲ್ಲ ಮೂರು ಕೆಡೆಟ್‌ಗಳಾದ ಸೇನಾ ಪಡೆ, ನೌಕಾ ಪಡೆ ಮತ್ತು ವಾಯು ಪಡೆ ಕೆಡೆಟ್‌ಗಳು ಮಂಡಿಸಿದ ಗಾರ್ಡ್‌ ಆಫ್ ಆನರ್‌ ಅನ್ನು ವಾಯು ಸೇನಾ ಮುಖ್ಯಸ್ಥರು ಪರಿಶೀಲಿಸಿದರು.

ನಂತರ ಅವರು ಧ್ವಜದ ಆವರಣವನ್ನು ಹಾಗೂ ಎನ್‌ಸಿಸಿಯ ಹೆಮ್ಮೆಯ “ಹಾಲ್‌ ಆಫ್ ಫೇಮ್‌’ಗೆ ಭೇಟಿ ನೀಡಿ ಹಳೆಯ ವಿದ್ಯಾರ್ಥಿಗಳ ಛಾಯಾಚಿತ್ರಗಳು, ಮಾದರಿಗಳು, ಪ್ರೇರಕ ಮತ್ತು ಇತರ ದೃಶ್ಯಗಳ ಸಮೃದ್ದ ಸಂಗ್ರಹದ ಪ್ರದರ್ಶನವನ್ನು ವೀಕ್ಷಿಸಿದರು.

ಸಭಾಂಗಣದಲ್ಲಿ ಪ್ರತಿಭಾವಂತ ಕೆಡೆಟ್‌ಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿಎಎಸ್‌ ಮತ್ತು ಇತರ ವಿಶೇಷ ಅತಿಥಿಗಳು ಸಾಕ್ಷಿಯಾದರು. ಈ ಸಂದರ್ಭದಲ್ಲಿ ಭದೌರಿಯಾ ಅವರು ಮಾತನಾಡಿ, ನಮ್ಮ ರಾಷ್ಟ್ರದ ಯುವಕರನ್ನು ರೂಪಿಸುವಲ್ಲಿ ಈ ಪ್ರಧಾನ ಸಂಸ್ಥೆ ವಹಿಸಿರುವ ಪಾತ್ರವನ್ನು ಶ್ಲಾಘಿಸಿದರು.‌ ಕಾರ್ಯಕ್ರಮದಲ್ಲಿ ಎನ್‌ಸಿಸಿ ಡಿಜಿ, ಎವಿಎಸ್‌ಎಂ ಲೆ.ಜ. ರಾಜೀವ್‌ ಚೋಪ್ರ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next