Advertisement
ಬಾಲ್ಯದಿಂದಲೇ ಭಾರತೀಯ ಸೇನೆಗೆ ಸೇರ್ಪಡೆ ಯಾಗುವ ಮಹದಾಸೆಯಿಂದಾಗಿ ಮನೆಯವರ ಮನಸ್ಸಿಗೆ ತುಸು ಬೇಸರವಾದರೂ ನನ್ನ ಆಯ್ಕೆ ಸೇನೆಯೇ ಆಗಿತ್ತು. ಅದರಲ್ಲೂ ಹೆಮ್ಮೆಯ ಭಾರತೀಯ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಭಾಗ್ಯ ನನ್ನದಾಯಿತು ಎನ್ನುತ್ತಾರೆ ದೇವರಾಜನ್.
Related Articles
ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇವರಾಜನ್ “ಉದಯವಾಣಿ’ಗೆ ನೀಡಿದ ಸಂದರ್ಶನದ ಸಂಕ್ಷಿಪ್ತ ಪಾಠ ಇಲ್ಲಿದೆ.
Advertisement
– ನಿಮ್ಮ ವೃತ್ತಿ ಜೀವನದ ವಿಶೇಷ ಕಾರ್ಯಾಚರಣೆ ಯಾವುದಾಗಿತ್ತು?2002-03ರಲ್ಲಿ ನಡೆದ ಕೊಲ್ಲಿ ಯುದ್ಧದ ಸಮಯದಲ್ಲಿ ಭಾರ ತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆ ಬಹಳ ಮುಖ್ಯ ವಾ ದ ದ್ದು. ಅಂದು ಏರ್ ಇಂಡಿಯಾ ಜತೆಗೆ ಭಾರತೀಯ ವಾಯು ಪಡೆಯು ಕೈಜೋಡಿಸಿ ಭಾರತೀಯರನ್ನು ತಾಯ್ನಾಡಿಗೆ ಕರೆ ತಂದಿತ್ತು. ಅಂದು ಸ್ಕ್ವಾಡ್ರನ್ ಲೀಡರ್ ಹುದ್ದೆಯಲ್ಲಿದ್ದು, ಈ ಕಾರ್ಯಾ ಚರಣೆ ಜೀವನದ ವಿಶೇಷ ಭಾಗವಾಗಿತ್ತು. 15 ಸಾವಿರಕ್ಕೂ ಅಧಿಕ ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆ ತಂದಿದ್ದೆವು. – ಚೀನ ಮತ್ತು ಭಾರತದ ಮಿಲಿಟರಿ ಬಲದ ವ್ಯವಸ್ಥೆ ಹೇಗಿದೆ?
ಎಲ್ಲ ದೇಶಗಳು ಅವುಗಳ ಭದ್ರತಾ ಅಗತ್ಯಗಳಿಗೆ ತಕ್ಕಂತೆ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ನಮಗೆ ದೇವರ ಕೊಡುಗೆಯಂತೆ ಮಿಲಿಟರಿ ಶಕ್ತಿ ಬಲಕ್ಕೆ ಅನುಗುಣವಾಗಿ ಹಿಮಾ ಲಯ ಪರ್ವತ ದೊಡ್ಡ ರಕ್ಷಣ ಗೋಡೆಯಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತ ವಿಶ್ವದ ಬಲಾಡ್ಯ ರಾಷ್ಟ್ರಗಳಿಗೂ ಸಡ್ಡು ಹೊಡೆಯುವ ರೀತಿಯಲ್ಲಿ ತನ್ನ ಸೇನಾಶಕ್ತಿಯನ್ನು ವೃದ್ಧಿಸಿಕೊಂಡಿದೆ. ರಕ್ಷಣ ಕ್ಷೇತ್ರದಲ್ಲಿನ ಭಾರತದ ಬೆಳವಣಿಗೆ ಚೀನಕ್ಕೂ ಚಿಂತೆಯನ್ನುಂಟು ಮಾಡಿದೆ. – ವಾಯುಸೇನೆ ಆಯ್ಕೆ ಪ್ರಕ್ರಿಯೆ ಕಠಿನವಾಗಿರುತ್ತದೆಯೇ?
ಅಭ್ಯರ್ಥಿಗಳ ದೈಹಿಕ, ಮಾನಸಿಕ ಆರೋಗ್ಯವನ್ನು ಪರೀಕ್ಷಿಸಿಯೇ ವಾಯುಪಡೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಹಾಕಿದವರೆಲ್ಲ ಆಯ್ಕೆಗೊಳ್ಳಲು ಸಾಧ್ಯವಿಲ್ಲ. ತಾಂತ್ರಿಕ ಶಿಕ್ಷಣ, ಸದೃಢ ಆರೋಗ್ಯ, ದೈಹಿಕ ಅರ್ಹತೆ ಇದ್ದಲ್ಲಿ ವಾಯುಸೇನೆಗೆ ಸೇರಬಹುದು. ನನ್ನ ಕಾಲೇಜಿನಲ್ಲಿ 1985ರಲ್ಲಿ ಭಾರತೀಯ ವಾಯು ಸೇವೆ ಪೈಲಟ್ ಆಫೀಸರ್ ಹುದ್ದೆಗೆ ಕ್ಯಾಂಪಸ್ ಸೆಲೆಕ್ಷನ್ ಆಯೋಜಿಸಿತ್ತು. ಅದರಲ್ಲಿ ಅರ್ಜಿ ಹಾಕಿದ್ದ 135 ಮಂದಿಯಲ್ಲಿ 10 ಮಂದಿ ಮಾತ್ರ ಆಯ್ಕೆಯಾಗಿದ್ದು, ಅದರಲ್ಲಿ ನಾನು ಒಬ್ಬನಾಗಿದ್ದೆ. – ಸಿಡಿಎಸ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ ಪ್ರಕರಣದ ಬಗ್ಗೆ ಏನು ಹೇಳುತ್ತೀರಿ?
ಸೇನಾ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೆ ಒಳಗಾಗಿದ್ದು ದುಃಖಕರ ಸಂಗತಿ. ಈ ದುರಂತ ನಡೆಯಬಾರದಿತ್ತು. ಬೆಟ್ಟ, ಗುಡ್ಡ ಪ್ರದೇಶದಲ್ಲಿ ಮೋಡಗಳ ಚಲನೆಯನ್ನು ಅಂದಾಜು ಮಾಡುವುದು ಕಷ್ಟ ಮತ್ತು ಇಲ್ಲಿನ ಹವಾಮಾನ ಭಿನ್ನವಾಗಿರುತ್ತದೆ. ಹೆಲಿ ಕಾಪ್ಟರ್, ವಿಮಾನಗಳ ಚಾಲನೆ ವೇಳೆ ಎಷ್ಟೇ ನುರಿತ ಪೈಲಟ್‌ಗಳಾದರೂ ಪರಿಸ್ಥಿತಿ ಹೀಗೆಯೇ ಇದೆ ಮತ್ತು ಇರಲಿದೆ ಎಂದು ಅಂದಾಜಿಸುವುದು ಸಾಧ್ಯವಿಲ್ಲ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಈ ದುರಂತ ಸಂಭವಿಸಿದೆ. – ವಾಯುಸೇನೆಗೆ ಸೇರ್ಪಡೆಗೊಳ್ಳ ಬಯಸುವ ಆಸಕ್ತರಿಗೆ ನಿಮ್ಮ ಸಲಹೆ ಏನು? ಭಾರತೀಯ ವಾಯುಸೇನೆ ಉತ್ಸಾಹಿ, ಸಾಹಸಿ ಪ್ರವೃತ್ತಿಯ ಯುವಕರಿಗೆ ದೇಶ ಸೇವೆ ಮಾಡಲು ಸದಾ ಬಾಗಿಲು ತೆರೆದಿರುತ್ತದೆ. ಈಗ ಸೇನೆಯಲ್ಲಿ ಉತ್ತಮ ವೇತನ ಸಹಿತ ಹಲವು ಸೌಲಭ್ಯಗಳು ಲಭಿಸುತ್ತಿವೆ. ಸೈನಿಕರಾಗ ಬಯಸುವವರು ಬದ್ಧತೆ, ಸ್ವಯಂ ಶಿಸ್ತು, ತಾಳ್ಮೆ ಗುಣವನ್ನು ಹೊಂದಿರಬೇಕು. ಮದ್ಯಪಾನ, ಧೂಮಪಾನಗಳಂತಹ ದುಶ್ಚಟಗಳಿಂದ ದೂರವಿರಬೇಕು. - ಅವಿನ್ ಶೆಟ್ಟಿ