ಮುಲ್ಕಿ: ಕಂಬಳ ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ
ಅವರು ಕಿನ್ನಿಗೋಳಿ ಸಮೀಪದ ಐಕಳಬಾವ ಕಾಂತಬಾರೆ ಬೂದಬಾರೆ ಕಂಬಳೋತ್ಸವ ಉದ್ಘಾಟಿಸಿ ಮಾತನಾಡಿ ಕಂಬಳವು ಕರಾವಳಿ ಮಣ್ಣಿನ ಅಭಿಮಾನದ ಪ್ರತೀಕವಾದ ಜಾನಪದ ಕ್ರೀಡೆ. ಕಂಬಳ ಸ್ಪರ್ಧೆ ನೆಲೆಯಲ್ಲಿ ಎತ್ತು, ಕೋಣಗಳ ಪೋಷಣೆ ಚೆನ್ನಾಗಿ ನಡೆದರೆ ಅದು ಕೃಷಿ ಉಳಿಕೆಗೂ ಪೂರಕವಾಗಲಿದೆ, ಜಾನಪದ ಕ್ರೀಡೆಯಾದ ಕಂಬಳಕ್ಕೆ ಗ್ರಾಮೀಣ ಪ್ರದೇಶದಲ್ಲಿ ಅತ್ಯದ್ಭುತ ಪ್ರೋತ್ಸಾಹ ದೊರೆಯುತ್ತಿದ್ದು ಇದಕ್ಕೆ ಐಕಳ ಕಾಂತಾಬಾರೆ ಬೂದಾಬಾರೆ ಕಂಬಳದ ಸೊಬಗು ಸಾಕ್ಷಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಕಳಬಾವ ಕುಟುಂಬಿಕರ ಕ್ಷೇಮಾಭಿವೃದ್ಧಿ (ರಿ) ನ ಡಾ. ಕೆಪಿಕೆ ಹೆಗ್ಡೆ ವಹಿಸಿದ್ದರು. ಕಂಬಳ ಕರೆಗಳ ಉದ್ಘಾಟನೆಯನ್ನು ಅದಾನಿ ಫೌಂಡೇಶನ್ ನ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ನೆರವೇರಿಸಿದರು.
ಈ ಸಂದರ್ಭ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ರಜನಿ ಚಂದ್ರಶೇಖರ್ ಭಟ್, ರಾಹುಲ್ ಸಿ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಸಂತೋಷ್ ಕುಮಾರ್ ಹೆಗ್ಡೆ, ಉದ್ಯಮಿ ಅರುಣ್ ರೈ ತೋಡಾರ್, ಐಕಳಬಾವ ಯಜಮಾನರಾದ ದೋಗಣ್ಣ ಸಿ.ಶೆಟ್ಟಿ, ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಉಪಾಧ್ಯಕ್ಷ ವೈ ಯೋಗೀಶ್ ರಾವ್, ಪ್ರಮೋದ್ ಶೆಟ್ಟಿ, ಸಂಚಾಲಕ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರ್ಲ,ತಾರಾನಾಥ ಶೆಟ್ಟಿ, ಮುಂಬೈ ಸಮಿತಿ ಅಧ್ಯಕ್ಷರಾದ ಕುಶಾಲ್ ಭಂಡಾರಿ, ಉಪಾಧ್ಯಕ್ಷ ಅನಿಲ್ ಶೆಟ್ಟಿ ಕೋಂಜಾಲು ಗುತ್ತು, ಪ್ರಧಾನ ಕಾರ್ಯದರ್ಶಿ ಗಣನಾಥ ಜೆ ಶೆಟ್ಟಿ,ಶ್ರೀಶ ಐಕಳ,ಸಾಯಿನಾಥ ಶೆಟ್ಟಿ, ಎಸಿಪಿ ಮಹೇಶ್ ಕುಮಾರ್, ಸಮಿತಿಯ ಪದಾಧಿಕಾರಿಗಳು, ಮುಂಬೈ ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ರವರನ್ನು ಸನ್ಮಾನಿಸಲಾಯಿತು,ಹಾಗೂ ಸಾಧಕರ ನೆಲೆಯಲ್ಲಿ ಐಕಳ ಕಾಂತಬಾರೆ ಬೂದಬಾರೆ ಕಂಬಳೋತ್ಸವ ಸಮಿತಿ ಅಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರನ್ನು ಸ್ವಾಮೀಜಿಯವರು ಗೌರವಿಸಿದರು.ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು.ಪತ್ರಕರ್ತ ಶರತ್ ಶೆಟ್ಟಿ ನಿರೂಪಿಸಿದರು.
ಬೆಳಿಗ್ಗೆ ಕಂಬಳದ ಕರೆಯಲ್ಲಿ ಏಳಿಂಜೆ ಶ್ರೀ ಲಕ್ಷ್ಮಿ ಜನಾರ್ಧನ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್, ವರುಣ್ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.