ರಾಯಚೂರು : ಪ್ರಾದೇಶಿಕ ಅಸಮತೋಲನೆ ಎದುರಿಸುತ್ತಿರುವ ರಾಯಚೂರು ಜಿಲ್ಲೆಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಏಮ್ಸ್ ಕೂಡ ಕೈ ತಪ್ಪುವ ಲಕ್ಷಣ ದಟ್ಟವಾಗಿದೆ. ಏಮ್ಸ್ ಹುಬ್ಬಳ್ಳಿಯತ್ತ ಮುಖ ಮಾಡಿದೆ ಎಂಬ ಸಂಗತಿಯಿಂದ ಜಿಲ್ಲೆಗೆ ಮತ್ತೂಮ್ಮೆ ಹಿನ್ನಡೆಯಾಗಿದೆ.
ಅಭಿವೃದ್ಧಿ ತಾರತಮ್ಯ ನಿವಾರಣೆ ಆಗಬೇಕಾದರೆ ಈ ಭಾಗಕ್ಕೆ ಐಐಟಿ, ಏಮ್ಸ್‌ನಂಥ ಸಂಸ್ಥೆ ಬರಬೇಕು ಎಂಬ ಅಂಶ ಡಾ| ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಉಲ್ಲೇಖವಾಗಿದೆ. ಆ ದಿಸೆಯಲ್ಲಿ ಪ್ರಯತ್ನ ಪಟ್ಟರೂ ಐಐಟಿಯನ್ನು ಜಿಲ್ಲೆಗೆ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹೋಗಲಿ ಏಮ್ಸ್‌ನಂಥ ಉನ್ನತ ಶಿಕ್ಷಣ ಸಂಸ್ಥೆಯನ್ನಾದರೂ ಕೊಡಿ ಎಂಬ ಹಕ್ಕೊತ್ತಾಯ ಕೂಡ ಸರ್ಕಾರಕ್ಕೆ ಕೇಳಿದಂತೆ ಕಾಣಿಸುತ್ತಿಲ್ಲ. ಏಮ್ಸ್ ಸ್ಥಾಪನೆಗೆ ಹುಬ್ಬಳ್ಳಿಯಲ್ಲಿ ಸ್ಥಳ ಪರಿಶೀಲಿಸಲಾಗಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸರ್ಕಾರವೇ ನೀಡಿದೆ. ಇದರಿಂದ ಏಮ್ಸ್ ಚಿತ್ತ ಬೇರೆಡೆಯೇ ಇದೆ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ :ರಾತ್ರೋರಾತ್ರಿ ಜೋಳದ ತೆನೆ ಕಳ್ಳತನ: ಆತಂಕ
ಗೌಣವಾಯಿತೇ ಹೋರಾಟ?: ಐಐಟಿಗಾಗಿ ಸುದೀರ್ಘ ಹೋರಾಟ ನಡೆಸಿದರೂ ರಾಜಕೀಯ ಷಡ್ಯಂತ್ರದಿಂದ ಅದು ಕೈ ತಪ್ಪಿತ್ತು. ಅದೇ ರೀತಿಯ ಅನ್ಯಾಯ ಮತ್ತೂಮ್ಮೆ ಆಗದಂತೆ ತಡೆಯಲು ಸಂಘಟಿತ ಹೋರಾಟ ಅಗತ್ಯ ಎಂಬ ನಿಲುವು ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಹೋರಾಟ ಸಮಿತಿ ರಚಿಸಿ ಒಂದೆರಡು ಸಭೆ ಕೂಡ ನಡೆಸಲಾಯಿತು.
ನಿರಂತರ ಹೋರಾಟ ನಡೆಸುವ ಮೂಲಕ ಏಮ್ಸ್ ಪಡೆದೇ ತೀರುತ್ತೇವೆ ಎಂಬ ವೀರಾವೇಷದ ಮಾತುಗಳು ಸಭೆಯಲ್ಲಿ ನೆರೆದವರಿಂದ ವ್ಯಕ್ತವಾಗಿತ್ತು. ಆದರೆ, ಅದೆಲ್ಲ ಕೇವಲ ಆರಂಭ ಶೂರತ್ವವೇ ಎನ್ನುವ ಸಂದೇಹ ಮೂಡತ್ತಿದೆ. ತರುವಾಯ ಅದಕ್ಕೆ ಸಂಬಂಧಿ ಸಿದ ಯಾವುದೇ ಹೋರಾಟವಾಗಲಿ, ರಾಜಕೀಯ ಬೆಳೆವಣಿಗೆಗಳಾಗಲಿ ಕಂಡು ಬಂದಿಲ್ಲ. ಪ್ರಬಲ ಒತ್ತಡವಿಲ್ಲದೇ ಯಾವ ಸೌಲಭ್ಯವು ದಕ್ಕದು ಎಂದು ಅರಿತ ಮೇಲೆಯೂ ಪರಿಣಾಮಕಾರಿ ಹೋರಾಟ ರೂಪುಗೊಳ್ಳದಿರುವುದೇ ?