Advertisement
ಶರಣಾಗತಿಗೆ ಸಮಿತಿಯವರು ಮೊದಲೇ ಪ್ರಯತ್ನಿಸಿದ್ದರೆ ನನ್ನ ಅಣ್ಣ ಜೈಲಿನಲ್ಲಾದರೂ ಇರುತ್ತಿದ್ದ. ನಮ್ಮಿಂದ ಸುಮಾರು 20 ವರ್ಷಗಳ ಕಾಲ ದೂರವಾಗಿದ್ದ ಸಹೋದರ ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಿದ ಬಳಿಕವಾದರೂ ನಮ್ಮೊಂದಿಗೆ ಇರುತ್ತಿದ್ದ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.
ಸಹೋದರನ ಈ ಪ್ರಕರಣ ಆಗುತ್ತಿದ್ದಂತೆ ಮುಂದೆ ಸಮಸ್ಯೆಯಾಗಬಹುದೆಂದು ತಿಳಿದು ಊರು ಬಿಟ್ಟು ಮುದ್ರಾಡಿಗೆ ಬಂದು ಸುಮಾರು 20 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಮಕ್ಕಳನ್ನು ಶಾಲೆಗೆ ಕಳಿಸಲು ತುಂಬಾ ಕಷ್ಟವಾಗುತ್ತಿದೆ. ದಿನಗೂಲಿ ಮಾಡಿಕೊಂಡು ಬದುಕುತ್ತಿದ್ದೇವೆ. ನಮ್ಮನ್ನು ಯಾವ ಸಮಿತಿಯೂ ಬಂದು ಭೇಟಿ ಮಾಡಿಲ್ಲ. ತೀರಾ ಬಡತನದಲ್ಲಿ ಜೀವನ ಸಾಗಿಸುವ ನಮಗೂ ನಕ್ಸಲ್ ಶರಣಾಗತಿಯ ಪ್ಯಾಕೇಜ್ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.