Advertisement

ಅನುಭವ ಮಂಟಪಕ್ಕೆ ಎಐಸಿಸಿ ಅಧ್ಯಕ್ಷ ಭೇಟಿ

08:34 AM Feb 14, 2018 | Team Udayavani |

ಬಸವಕಲ್ಯಾಣ (ಬೀದರ): ವಿಶ್ವದ ಪ್ರಥಮ ಪಾರ್ಲಿಮೆಂಟ್‌, ಲಿಂಗಾಯತರ ಶ್ರದ್ಧಾ ಕೇಂದ್ರವಾಗಿರುವ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ನೀಡಿದರು. ಬಸವಣ್ಣನ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಧನ್ಯತಾಭಾವ ವ್ಯಕ್ತಪಡಿಸಿದರು.

Advertisement

ಹೆಲಿಪ್ಯಾಡ್‌ನಿಂದ ರಸ್ತೆ ಮಾರ್ಗವಾಗಿ ನೇರವಾಗಿ ಅನುಭವ ಮಂಟಪಕ್ಕೆ ಆಗಮಿಸಿದ ರಾಹುಲ್‌  ಅವರನ್ನು ಅನುಭವ ಮಂಟಪ ಟ್ರಸ್ಟ್‌ನಿಂದ ಸ್ವಾಗತಿಸಲಾಯಿತು. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಬಸವ ಣ್ಣನ ನೇತೃತ್ವದಲ್ಲಿ ಶರಣರು ನಡೆಸುತಿದ್ದ ಚಿಂತನೆಯ ಪರಿಕಲ್ಪನೆಯುಳ್ಳ ಭಾವ ಚಿತ್ರವನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಯಿತು. ಶರಣರ ಕ್ರಾಂತಿ, ಕಾಯಕ ಮತ್ತು ಸಂದೇಶ ಕುರಿತು ಭಾವಚಿತ್ರಗಳ ಮೂಲಕ ಟ್ರಸ್ಟ್‌ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾಹಿತಿ ನೀಡಿದರು. ರಾಹುಲ್‌ ಸಹ ಆಸಕ್ತಿಯಿಂದ ಆಲಿಸಿದರು.

ಹುಲಸೂರಿನ ಡಾ.ಶಿವಾನಂದ ಸ್ವಾಮೀಜಿ ಅವರು ರಾಹುಲ್‌ ಅವರ ಕೈಗೆ ಇಷ್ಟಲಿಂಗ ನೀಡಿದರು. ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಇಷ್ಟಲಿಂಗ ಬಸವಣ್ಣ ನೀಡಿದ ಅದ್ಭುತ ಕೊಡುಗೆಯಾಗಿದೆ ಎಂದು ವಿವರಿಸಿದರಲ್ಲದೇ ಪೂಜೆಯ ಮಹತ್ವ, ಮಾಡುವ ವಿಧಾನದ ಬಗ್ಗೆ ಹಿಂದಿ, ಆಂಗ್ಲ ಭಾಷೆಯಲ್ಲಿ ತಿಳಿ ಹೇಳಿದರು. ಈ ವೇಳೆ ಮಾತನಾಡಿದ ರಾಹುಲ್‌, ಸಾಮಾಜಿಕ ಸಮಾನತೆ ಗಾಗಿ ಕ್ರಾಂತಿ ನಡೆಸಿ, ವಿಶ್ವಕ್ಕೆ ಸಮಾನತೆ ಸಂದೇಶ ನೀಡಿದ ಕಲ್ಯಾಣ ಭೂಮಿಗೆ ಆಗಮಿಸಿ ಧನ್ಯನಾಗಿದ್ದೇನೆ. ಅವರ ಚಿಂತನೆಗಳ ಮೇಲೆ ನಾವು ನಡೆಯುತ್ತಿದ್ದೇವೆ. ಬಸವ ಸಿದ್ಧಾಂತ ಮತ್ತು ವಚನ ಸಾಹಿತ್ಯದ ಅಧ್ಯಯನ ಜತೆಗೆ ಅನುಷ್ಠಾನದಲ್ಲಿ ತರುತ್ತೇನೆ ಎಂದರು.

ರಾಹುಲ್‌ ಆಹ್ವಾನ: ಅನುಭವ ಮಂಟಪಕ್ಕೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ  ಅವರು, ವೀಕ್ಷಣೆ ಬಳಿಕ ಹಿಂದಿರುಗುವಾಗ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರಿಗೆ ತಮ್ಮ ನಿವಾಸಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next