Advertisement

2021ರ ಚುನಾವಣೆಯಲ್ಲೂ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟ ಮುಂದುವರೆಯುತ್ತದೆ: ಪಳನಿಸ್ವಾಮಿ

08:09 PM Nov 21, 2020 | Mithun PG |

ಚೆನ್ನೈ: ಆಡಳಿತರೂಢ  ಎಐಎಡಿಎಂಕೆ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಲಿದೆ ಎಂದು ವರದಿಯಾಗಿದೆ. ಈ ಕುರಿತು, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನಿರ್ ಸೆಲ್ವಂ ಖಚಿತಪಡಿಸಿದ್ದಾರೆ.

Advertisement

ವಿಧಾನಸಭಾ  ಚುನಾವಣೆಗೆ ಇನ್ನು ಆರು ತಿಂಗಳುಗಳ ಕಾಲಾವಕಾಶವಿದ್ದು, ಏತನ್ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ತಮಿಳುನಾಡಿಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಮೈತ್ರಿ ಮುಂದುವರೆಸುವ ಘೋಷಣೆ ಹೊರಡಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಪಳನಿಸ್ವಾಮಿ, ಮುಂದಿನ ವಿಧಾನಸಭಾ  ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಹೆಚ್ಚು ಸ್ಥಾನ ಗೆಲ್ಲುವುದು ಮಾತ್ರವಲ್ಲದೆ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಲವ್‌ ಜಿಹಾದ್ ನಿಯಂತ್ರಿಸಲು ಕಾನೂನಿನ ಅವಶ್ಯಕತೆ ಇಲ್ಲ: ಅಸ್ಲಾಮ್‌ ಶೇಖ್‌

2019ರ ಲೋಕಸಭಾ ಚುನಾಣೆಯಲ್ಲಿ ನೀರಸ ಪ್ರದರ್ಶನ ಮತ್ತು ವೆಟ್ರಿವೇಲ್ ಯಾತ್ರಾ ವಿವಾದ ಸಂದರ್ಭದಲ್ಲಿ ಎರಡು ಪಕ್ಷಗಳ ನಡುವೆ ಭಿನ್ನಮತ ಸ್ಪೋಟಗೊಂಡ ನಂತರ 2021 ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದೇ ಹೇಳಲಾಗಿತ್ತು. ಆದರೇ ಈ ಅನುಮಾನಕ್ಕೆ ಈಗ ತೆರೆಬಿದ್ದಿದೆ.

Advertisement

ಇಂದು (ನ.21) ಚೆನ್ನೈಗೆ ಆಗಮಿಸಿದ ಅಮಿತ್ ಸುಮಾರು 67,378 ಕೋಟಿ ಅಭಿವೃದ್ದಿ ಯೋಜನೆಯನ್ನು ಉದ್ಘಾಟಿಸಿದ್ದರು. ಈ ವೇಳೆ ಮಾತನಾಡಿದ ಅವರು, ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನಾಯಕತ್ವದಲ್ಲಿ ತಮಿಳುನಾಡು ಉತ್ತಮ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1ಕೋಟಿ ರೂ. ವಂಚನೆ :ಪೊಲೀಸರ ಬಲೆಗೆ ಬಿದ್ದ ಆರೋಪಿ

Advertisement

Udayavani is now on Telegram. Click here to join our channel and stay updated with the latest news.

Next