ಮದ್ದೂರು: ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತವನ್ನಾಗಿಸಲು ಮುಂದಾಗಬೇಕು ಎಂದು ತಹಶೀಲ್ದಾರ್ ಎಚ್. ಬಿ.ವಿಜಯ ಕುಮಾರ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಪಲ್ಸ್ ಪೋಲಿಯೋ ಸಂಬಂಧ ಚಾಲನಾ ಸಮಿತಿ ಸಭೆ ಯಲ್ಲಿ ಮಾತನಾಡಿದ ಅವರು, ಜ.31ರ ಭಾನು ವಾರ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದೆ, ಸಂಘ- ಸಂಸ್ಥೆಗಳು, ಅಧಿಕಾರಿಗಳುಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕು ಎಂದರು.
18,669 ಮಕ್ಕಳಿಗೆ ಲಸಿಕೆ ಹಾಕುವ ಗುರಿ: ತಾಲೂಕಿನಲ್ಲಿ 18,669 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು ಅಂಗನವಾಡಿ, ಶಾಲೆ, ಬಸ್, ರೈಲ್ವೆ ನಿಲ್ದಾಣ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥ ಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕ ಲಾಗು ವುದು. ಪೋಷಕರು ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆ ತರುವ ಮೂಲಕ ಪೋಲಿಯೋ ರೋಗದಿಂದ ಮುಕ್ತಿ ಹೊಂದಬೇಕು ಎಂದರು.
ಇದನ್ನೂ ಓದಿ:ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ: ಎಸ್ಪಿ
ಅಧಿಕಾರಿಗಳಿಗೆ ಸೌಲಭ್ಯ ಕಲ್ಪಿಸಿ: ಲಸಿಕೆ ಹಾಕದ ಮಕ್ಕಳಿಗೆ ಅಂಗನವಾಡಿ, ಆಶಾ ಹಾಗೂ ಶ್ರೂಶ್ರೂಶಕಿಯರು ಪ್ರತಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದು, ಮಕ್ಕಳ ಪೋಷ ಕರು ಯಾವುದೇ ಆತಂಕಕ್ಕೆ ಒಳಗಾಗದೆ ಲಸಿಕೆ ಹಾಕಿಸುವ ಜತೆಗೆ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ಆರೋಗ್ಯ ಅಧಿಕಾರಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸ ಬೇಕು ಎಂದು ಸೂಚಿಸಿದರು. ತಾಪಂ ಇಒ ಮುನಿರಾಜು, ಬಿಇಒ ಮಹದೇವ, ಸಿಡಿಪಿಒ ಚೇತನ್‌ಕುಮಾರ್, ತಾಲೂಕು ಆರೋಗ್ಯ ಇಲಾಖೆ ಡಾ.ಆಶಾಲತಾ, ಸಹಾಯಕ ಅಧಿಕಾರಿ ಎಸ್.ಕೆ. ತಮ್ಮೇಗೌಡ ಹಾಜರಿದ್ದರು.