ಪಾಟ್ನಾ: ಇನ್ನು ಕೆಲ ದಿನಗಳಲ್ಲಿ ನಡೆಯಲಿರುವ ಬಿಹಾರ ಗ್ರಾಮ ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಯೊಬ್ಬ ಎಮ್ಮೆ ಏರಿ ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕತಿಹಾರ್ ಜಿಲ್ಲೆಯ ರಾಂಪುರ ಪಂಚಾಯಿತಿಯಿಂದ ಚುನಾವಣಾ ಕಣಕ್ಕಿಳಿದಿರುವ ಅಜಾದ್ ಅಮಲ್ ಈ ರೀತಿ ಎಮ್ಮೆಯೇರಿ ಬಂದ ವ್ಯಕ್ತಿ.
“ನಾನೊಬ್ಬ ಹಸುಸಾಕಣೆ ಮಾಡುವ ವ್ಯಕ್ತಿ. ನನಗೆ ಪೆಟ್ರೋಲ್, ಡೀಸೆಲ್‌ಗೆ ಬೆಲೆ ತೆರಲಾಗದು. ಆ ಕಾರಣ ನಾನು ಎಮ್ಮೆ ಹತ್ತಿ ಬಂದು ನಾಮಪತ್ರ ಸಲ್ಲಿಸಿದೆ’ ಎಂದು ಆಜಾದ್ ಹೇಳಿಕೊಂಡಿದ್ದಾರೆ.
ಬಿಹಾರದಲ್ಲಿ ಸೆ.24ರಿಂದ ಡಿ.12ರವರೆಗೆ 11 ಹಂತಗಳಲ್ಲಿ ಪಂಚಾಯಿತಿ ಚುನಾವಣೆ ನಡೆಯಲಿದೆ.
Related Articles
ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿ ಸೋಂಕು ಇಳಿಮುಖ | 10 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ