Advertisement
ಗುರುವಾರ ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಆಹಾರ್ ಅಧ್ಯಕ್ಷ ಆದರ್ಶ್ ಬಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರದರ್ಶನ ಮಳಿಗೆಗಳಿಗೆ ಪದ್ಮನಾಭ ಎಸ್. ಪಯ್ಯಡೆ ಅವರು ಸಾಂಪ್ರದಾ ಯಿಕವಾಗಿ ತೆಂಗಿನಕಾಯಿ ಒಡೆದು, ಶ್ರೀ ವಿN°àಶ್ವರನಿಗೆ ಆರತಿಗೈದು, ರಿಬ್ಬನ್ ಬಿಡಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಸುಮಾರು ನಾಲ್ಕು ದಶಕಗಳಿಂದ ಅವಿರತವಾಗಿ ಸೇವಾ ನಿರತವಾಗಿಕೊಂಡಿರುವ ಆಹಾರ್ ಆಹಾರೋದ್ಯಮದ ಶಕ್ತಿ ಯಾಗಿ ಮುನ್ನಡೆಯುತ್ತಿರುವುದು ಅಭಿಮಾನದ ವಿಚಾರ. ಆಹಾರ್ ಹೊಟೇಲ್ ಉದ್ಯಮದ ಪ್ರತಿಷ್ಠೆಯ ಮತ್ತು ಪ್ರತಿಷ್ಠಿತ ಸಂಸ್ಥೆಯಾಗಿದೆ. ಜಾಗತೀಕರಣದ ಈ ಕಾಲದಲ್ಲಿ ಆಹಾರ್ ಬದಲಾವಣೆಗಳಿಗೆ ಸ್ಪಂದಿಸಿ ಮುನ್ನಡೆಸುವ ಅಗತ್ಯವಿದೆ.
Related Articles
Advertisement
ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಶಶಿಧರ ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ವಿಶ್ವಪಾಲ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಜೆ. ಡಿ. ಶೆಟ್ಟಿ, ವಿವಿಧ ವಲಯಗಳ ಉಪಾಧ್ಯಕ್ಷರುಗಳಾದ ವಲಯ ಒಂದರ ಮಹೇಂದ್ರ ಎಸ್. ಕರ್ಕೇರ, ವಲಯ ಎರಡರ ಕೆ. ವಿ. ಶೆಟ್ಟಿ, ವಲಯ ಮೂರರ ವಿಜಯ ಕೆ. ಶೆಟ್ಟಿ, ವಲಯ ನಾಲ್ಕರ ಸುನಿಲ್ ಎಸ್. ಶೆಟ್ಟಿ, ವಲಯ ಐದರ ರವೀಂದ್ರನಾಥ್ ಎಲ್. ನೀರೆ, ವಲಯ ಆರರ ಅಮರ್ ಎಸ್. ಶೆಟ್ಟಿ, ವಲಯ ಏಳರ ರಾಜನ್ ಆರ್. ಶೆಟ್ಟಿ, ವಲಯ ಎಂಟರ ಜಗದೀಶ್ ಎಸ್. ಶೆಟ್ಟಿ, ವಲಯ ಒಂಬತ್ತರ ಕರುಣಾಕರ ಎಸ್. ಶೆಟ್ಟಿ, ವಲಯ ಹತ್ತರ ಪ್ರಭಾಕರ ಬಿ. ಶೆಟ್ಟಿ ಹಾಗೂ ಸಲಹಾ ಸಮಿತಿ, ಉಪ ಸಮಿತಿಗಳು, ಸದಸ್ಯರು, ಆಡಳಿತ ಸಮಿತಿ, ಮಾಜಿ ಅಧ್ಯಕ್ಷರುಗಳ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು. ಆಹಾರ್‌ನ ಅಧ್ಯಕ್ಷ ಆದರ್ಶ್ ಶೆಟ್ಟಿ ಸ್ವಾಗತಿಸಿದರು.
ಕಾರ್ಯನಿರ್ವಾಹಕ ಕಾರ್ಯ ದರ್ಶಿ ವಸಂತ್ ಕೆ. ಕಾರ್ಕಳ್ ಪ್ರಸ್ತಾವನೆಗೈದು ವಂದಿಸಿದರು. ಸದಸ್ಯ ಬಾಂಧವರು, ಹೊಟೇಲ್ ಉದ್ಯಮಿಗಳು, ವಿವಿಧ ಹೊಟೇಲ್ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಚಿತ್ರ- ವರದಿ:ರೋನ್ಸ್ ಬಂಟ್ವಾಳ್