Advertisement
5 ನಿಮಿಷಕ್ಕೊಮ್ಮೆ ಸಂಚಾರಭೂಕುಸಿತ ಪರಿಣಾಮ ವಾಹನ ದಟ್ಟಣೆ ನಿಭಾಯಿಸಲು ಆಗುಂಬೆ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ಪ್ರತಿ 5 ನಿಮಿಷಕ್ಕೊಮ್ಮೆ ಬಿಡಲಾಗುತ್ತಿದೆ. ಜತೆಗೆ ವಿಶೇಷ ಬಂದೋಬಬಸ್ತ್ ಗೆ ಮಾಡಲಾಗಿದೆ.
ಈ ಮೊದಲು ಘಾಟಿ ತಿರುವಿನಲ್ಲಿ ಕಟ್ಟಿದ ತಡೆಗೋಡೆಗಳಿಗೆ ವಾಹನಗಳು ಡಿಕ್ಕಿ ಹೊಡೆದು ಬಿರುಕು ಬಿಟ್ಟಿದ್ದು, ಮಳೆಗೆ ಅವುಗಳು ಕುಸಿದಿವೆ. ಶಿವಮೊಗ್ಗ ವ್ಯಾಪ್ತಿಯ 5ನೇ ಸುತ್ತು ಹಾಗೂ ಉಡುಪಿ ವ್ಯಾಪ್ತಿಯ 6ನೇ ತಿರುವಿನಲ್ಲಿ ತಡೆಗೋಡೆ ಕುಸಿದಿದ್ದು ವಾಹನಗಳು ನಿಯಂತ್ರಣ ತಪ್ಪಿದರೆ ಅಪಾಯ ತಪ್ಪಿದ್ದಲ್ಲ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಭೂಕುಸಿತ ಉಂಟಾದ ಸ್ಥಳಕ್ಕೆ ರಾ.ಹೆ. ಸಹಾಯಕ ಎಂಜಿನಿಯರ್ ರವಿ, ಕಾರ್ಕಳ ತಹಶೀಲ್ದಾರ್ ಮಹಮ್ಮದ್ ಇಸಾಕ್ ಕಾರ್ಕಳ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
Related Articles
ಭದ್ರತಾ ದೃಷ್ಠಿಯಿಂದ ಕುಸಿತದ ಪ್ರದೇಶ ದುರಸ್ಥಿಯಾಗುವ ತನಕ ರಾತ್ರಿ ವೇಳೆ ಬಸ್ಸು ಸಂಚಾರವನ್ನು ನಿರ್ಬಂಧಿಸಲಾಗಿದೆ.
Advertisement
ರಸ್ತೆಯಲ್ಲೇ ಹರಿವ ನೀರುಆಗುಂಬೆ ಘಾಟಿಯ 7ನೇ ಸುತ್ತು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡಿಲ್ಲ. ಇನ್ನು 7ನೇ ಸುತ್ತಿನ ಕೆಳಭಾಗ ಉಡುಪಿ ಜಿಲ್ಲೆಗೆ ಬರುತ್ತಿದ್ದು, ಇಲ್ಲಿ ಚರಂಡಿಯೇ ಇಲ್ಲ. ಆದ್ದರಿಂದ ಈ ಭಾಗದಲ್ಲಿ ನೀರು ರಸ್ತೆಯಲ್ಲೇ ಹರಿದು ಭೂಕುಸಿತಕ್ಕೆ ಕಾರಣವಾಗಿದೆ. ಮರಗಳೂ ಅಪಾಯಕಾರಿಯಾಗಿ ರಸ್ತೆಗೆ ವಾಲಿಕೊಂಡಿದೆ.
ಘನ ವಾಹನಗಳಿಗೆ ಪ್ರವೇಶವಿಲ್ಲ
ಭೂಕುಸಿತ ಉಂಟಾದ ರಸ್ತೆಯು ಕಡಿದಾದ ತಿರುವು ಆದ ಕಾರಣ ಅಧಿಕ ಸಾಮರ್ಥ್ಯದ ಲಾರಿ, ಟಿಪ್ಪರ್ ಗಳನ್ನು ರಸ್ತೆ ದುರಸ್ತಿ ಆಗುವಲ್ಲಿವರೆಗೆ ಮತ್ತು ರಾತ್ರಿ ಬಸ್ ಸಂಚಾರ ನಿಷೇಧಿಸಿ ಆದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಭಯ ಬೇಡ
ಈ ಹಿಂದೆ ಟಿಪ್ಪರ್ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಬಿರುಕುಗೊಂಡಿತ್ತು. ಈಗ ತಡೆಗೋಡೆ ಕುಸಿತವಾದ ಪ್ರದೇಶಗಳಲ್ಲಿ ಸ್ಯಾಂಡ್‌ಬ್ಯಾಗ್ ಗಳನ್ನು ಅಳವಡಿಸಲಾಗುತ್ತಿದ್ದು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ.
– ಮಂಜುನಾಥ ನಾಯಕ್, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಇಲಾಖೆ ಜಾಗೃತವಾಗಲಿ
ಈ ಹಿಂದೆ ಘಾಟಿ ದುರಸ್ತಿ ವೇಳೆ ಸಂಪರ್ಕ ಕಡಿತವಾಗಿತ್ತು. ಈಗ ರಸ್ತೆಯಲ್ಲೇ ನೀರು ಹರಿಯುವ ಸಮಸ್ಯೆಯಿಂದ ಘಾಟಿ ಕುಸಿಯುವ ಬೀತಿಯಲ್ಲಿದೆ. ಕೂಡಲೇ ಇಲಾಖೆ ಜಾಗೃತವಾಗಲಿ.
– ವೆಂಕಟೇಶ್ ಶೆಟ್ಟಿ, ಸೋಮೇಶ್ವರ – ದಟ್ಟಣೆ ನಿಭಾವಣೆಗೆ 5 ನಿಮಿಷಕ್ಕೊಮ್ಮೆ ಸಂಚಾರ
– ಚರಂಡಿಯಿಲ್ಲದೇ ರಸ್ತೆಯಲ್ಲಿ ನೀರು ಹರಿದ ಪರಿಣಾಮ
– ರಾತ್ರಿ ಬಸ್ ಸಂಚಾರ, ಘನ ವಾಹನಗಳಿಗೆ ನಿಷೇಧ
– ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ