Advertisement
ಈಗಾಗಲೇ ಹಲವು ರೈತರು ಗದ್ದೆ ಹದ ಮಾಡಿ ಕೃಷಿ ಯೋಗ್ಯವನ್ನಾಗಿಸಿದ್ದಾರೆ. ಸುಮಾರು 20ರಿಂದ 25 ದಿನಗಳಲ್ಲಿ ಹಾಕಿದ ಬೀಜ ಗದ್ದೆಯಲ್ಲಿ ನಾಟಿ ಮಾಡಲು ಯೋಗ್ಯವಾಗಿರುತ್ತದೆ. ಈ ಮಧ್ಯೆ ಕೆಲವು ರೈತರು ಗದ್ದೆಗಳಲ್ಲಿ ಸುಗ್ಗಿ ಬೆಳೆಯುವ ಬದಲಾಗಿ ಉದ್ದು ಮುಂತಾದ ಧಾನ್ಯದ ಬೀಜ ಹಾಕಿದ್ದಾರೆೆ. ಆದರೆ ಬಸ್ರೂರು ಪ್ರದೇಶದಲ್ಲಿ ಹೆಚ್ಚಿನ ರೈತರು ಸುಗ್ಗಿ ಬೆಳೆಯ ಆಶಾಭಾವನೆಯನ್ನು ಹೊಂದಿದ್ದಾರೆ. ಕಾತಿ ಬೆಳೆಗೆ ಮಾಡಿದ ಸಾಲದ ಲೆಕ್ಕಾಚಾರ ಇನ್ನೂ ಮುಕ್ತಾಯವಾಗದ ಕಾರಣ ಇನ್ನೂ ಬ್ಯಾಂಕ್‌ನಲ್ಲಿ ಯಾವುದೇ ರೈತ ಸುಗ್ಗಿ ಬೆಳೆಗೆ ಈ ಭಾಗದಲ್ಲಿ ಸಾಲ ಮಾಡಿಲ್ಲ. ಸುಗ್ಗಿ ಬೆಳೆ 3.5 ರಿಂದ 4 ತಿಂಗಳಲ್ಲಿ ಮುಗಿಯುತ್ತಲೇ ಕೊನೆಯ ಬೆಳೆ ಕೊಳ್ಕೆ ಬೇಸಾಯ ನಡೆಯಲಿದೆ.
ನಾನು ಪ್ರತಿ ವರ್ಷ ಸುಗ್ಗಿ ಬೆಳೆಯ ಬದಲು ಧಾನ್ಯವನ್ನೇ ಗದ್ದಗೆ ಹಾಕುತ್ತಿದ್ದೆ. ಆದರೆ ಈ ಬಾರಿ ಕಾತಿ ಬೆಳೆ ಸಾಧಾರಣವಾಗಿ ಬಂದುದರಿಂದ ಇರುವ ಹಣವನ್ನೇ ಬಳಸಿ ಮತ್ತೆ ಸ್ವಲ್ಪ ಹಣವನ್ನು ಕೈಗಡ ಮಾಡಿ ಸುಗ್ಗಿ ಬೆಳೆಗೆ ಕೈಹಾಕಿದ್ದೇನೆ. ಸಾಲದ ಲೆಕ್ಕಾಚಾರ ಇನ್ನೂ ಆಗಿಲ್ಲ. ಸುಗ್ಗಿ ಬೆಳೆಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಿದೆ.
– ರಾಮ ಪೂಜಾರಿ, ಕೃಷಿಕ ಬಳ್ಕೂರು