Advertisement

ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಕೃಷಿ ಕೂಲಿಕಾರರ ಸಂಘ: ಪ್ರತಿಭಟನೆ

07:10 AM Sep 10, 2017 | Team Udayavani |

ಬೈಂದೂರು: ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘ ಕುಂದಾಪುರ ಇದರ ವತಿಯಿಂದ ಶಿರೂರು ಗ್ರಾ.ಪಂ. ಬಳಿ ಹಕ್ಕುಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಶಿರೂರು ಗ್ರಾಮದ ನಿವೇಶನ ರಹಿತರಿಂದ 1,160 ಅರ್ಜಿಗಳನ್ನು  ಸ್ವೀಕರಿಸಲಾಗಿದೆ. ಪಂಚಾಯತ್‌ ವಸತಿ ಸಮಿತಿಯ ಮೂಲಕ ಪರಿಶೀಲಿಸಿ ನಿವೇಶನ ರಹಿತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಬೇಕು.  ಶಿರೂರು ಗ್ರಾಮದ ಬಡ ನಿವೇಶನ ರಹಿತರು 2012ರಲ್ಲಿ ಮನೆ ನಿವೇಶನ ಕೋರಿಕೆಗೆ ಸಲ್ಲಿಸಿದ 60 ಅರ್ಜಿದಾರರಿಗೆ ಇಲ್ಲಿಯವರೆಗೆ ಕ್ರಮ ತೆಗೆದುಕೊಂಡಿಲ್ಲ. ಈ ಅರ್ಜಿದಾರರಿಗೆ ಶೀಘ್ರ ಹಕ್ಕು ಪತ್ರ ಮಂಜೂರು ಮಾಡಬೇಕೆಂದು ಆಗ್ರಹಿಸಿದರು. ವೆಂಕಟೇಶ ಕೋಣಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.  ಕೃಷಿ ಕೂಲಿ ಕಾರ್ಮಿಕ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next