Advertisement

ಅರಣ್ಯ ಅಧಿಕಾರಿಗಳಿಂದ ಕೃಷಿ ಭೂಮಿ ತೆರವು ಕಾರ್ಯಾಚರಣೆ

04:35 PM Mar 07, 2022 | Team Udayavani |

ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮದ ಶಾರದಮ್ಮ ದಿ.ದೊಡ್ಡತಿಮ್ಮಯ್ಯ ಕೃಷಿ ಕುಟುಂಬವು ಸರ್ವೆ ನಂ 116ರ ಭೂಮಿಯಲ್ಲಿ ಕಳೆದನಲವತ್ತು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಜಮೀನನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದೆ ಎಂದು ವಲಯಅರಣ್ಯಾಧಿಕಾರಿ ದುಗ್ಗಪ್ಪ ಹಾಗೂ ಸಿಬ್ಬಂದಿ ಪೋಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಕೃಷಿ ಭೂಮಿಯನ್ನು ತೆರವುಗೊಳಿಸಿದ ಘಟನೆ ಭಾನುವಾರ ನಡೆದಿದೆ.

Advertisement

ಮಾರಣ ಹೋಮ: ಜಮೀನಿನ ಒತ್ತುವರಿ ತೆರವು ಮಾಡುವಾಗ ಸುಮಾರು 100ಕ್ಕೂಅಡಕೆ ಮರಗಳು ಹಾಗೂ 15ಕ್ಕೂ ಹೆಚ್ಚುತೆಂಗಿನ ಮರಗಳು ಧರೆಗುರುಳಿ ಅವುಗಳಮಾರಣ ಹೋಮ ನಡೆದಿದೆ. ಒಟ್ಟಾರೆ ಸುಮಾರು 500 ಕ್ಕೂ ಅಧಿಕ ಅಡಕೆ ಮರಗಳು ಹಾಗೂ 150 ಕ್ಕೂ ಅಧಿಕ ತೆಂಗಿನಮರಗಳನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿವೆ ಎಂದು ವಶಪಡಿಸಿಕೊಳ್ಳಲಾಗಿದೆ.

ಮಾನವೀಯತೆ ಮರೆತ ಅರಣ್ಯಾಧಿಕಾರಿಗಳು: ತೆರವು ಸಂದರ್ಭದಲ್ಲಿ ಅರಣ್ಯಾಧಿಕಾರಿಗಳನ್ನು ಒಂದು ದಿನ ಸಮಯಾವಕಾಶ ನೀಡಿ ಕೋರ್ಟ್‌ನಿಂದ ತಡೆಯಾಜ್ಞೆ ಬಂದಿದೆ. ಅದರ ಪ್ರತಿಯನ್ನು ಸೋಮವಾರ ನಿಮಗೆ ನೀಡುತ್ತೇನೆ ಎಂದು ರೈತಮಹಿಳೆ ಶಾರದಮ್ಮ ಪರಿಪರಿಯಾಗಿಅಂಗಲಾಚಿ ಬೇಡಿಕೊಂಡರೂಕೇಳಲಿಲ್ಲ.

ಅರಣ್ಯ ಸೂಚಿ ಆ್ಯಪ್‌ನಂತೆ ತೆರವು: ಒತ್ತುವರಿ ಜಮೀನಿನಲ್ಲಿ ಅರಣ್ಯ ಇಲಾಖೆಗೆಸೂಚಿಸಿರುವಂತೆ ಅರಣ್ಯ ಸೂಚಿ ಆ್ಯಪ್‌ನಕ್ಷೆಯನ್ನು ತೋರಿಸಿದ್ದಂತೆ ಅರಣ್ಯಾಧಿಕಾರಿಗಳು ಮೊಬೈಲ್‌ನಲ್ಲಿ ನಕ್ಷೆ ಹಿಡಿದುತೆರವು ಕಾರ್ಯಾಚರಣೆ ಮೂಲಕ ಗಡಿಗುರುತಿಸುವ ಕೆಲಸ ಮಾಡುತ್ತಿರುವುದುಕಂಡುಬಂದಿತ್ತು.

ಹಲವು ಅನುಮಾನಗಳ ಸುತ್ತ: ಕಳೆದ ಹತ್ತುವರ್ಷಗಳ ಹಿಂದೆ ಅರಣ್ಯ ಇಲಾಖಾಧಿಕಾರಿಗಳು ಸರ್ವೆ ನಂ. 116 ರ ಮೀಸಲು ಅರಣ್ಯ ಪ್ರದೇಶದ ಸರ್ವೆ ಮಾಡಿಸಿಗಡಿಭಾಗದ ಕಲ್ಲನ್ನು ನೆಟ್ಟಿರುವುದುಕಂಡುಬಂದಿದೆ. ಇತ್ತೀಚೆಗೆ ಸಿಮೆಂಟ್‌ಕಂಬವನ್ನು ನಿಲ್ಲಿಸಿ ಬಣ್ಣವನ್ನು ಬಳಿದು ಅರಣ್ಯಇಲಾಖೆಯ ಗಡಿಭಾಗದ ನಂಬರ್‌ ಹಾಕಿರುವುದು ಕಂಡುಬಂದಿದೆ.

Advertisement

ಗುಬ್ಬಿ ತಾಲೂಕಿನ ಅಮ್ಮನಘಟ್ಟ ಗ್ರಾಮದ ಸರ್ವೆ ನಂಬರ್‌ 116 ರಲ್ಲಿ 401 ಎಕರೆಯಷ್ಟುಮೀಸಲು ಅರಣ್ಯ ಪ್ರದೇಶವಿದೆ. ರೈತರು ಅರಣ್ಯಭೂಮಿಯನ್ನು ಅತಿಕ್ರಮಣ ಮಾಡಿರುವುದರಿಂದನಮ್ಮ ಸಿಬ್ಬಂದಿ ತೆರವು ಕಾರ್ಯಾಚರಣೆ ಮಾಡಿ ಅರಣ್ಯದ ಗಡಿ ಗುರುತಿಸುತ್ತಿದ್ದಾರೆ. -ಡಿಎಫ್ಒ, ರಮೇಶ್‌

ಕಳೆದ ನಲವತ್ತು ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದನಮಗೆ ಈ ಘಟನೆಯಿಂದ ಆಘಾತಕ್ಕೆಒಳಗಾಗಿದ್ದೇವೆ. ಹತ್ತು ವರ್ಷಗಳ ಹಿಂದೆಅರಣ್ಯಾಧಿಕಾರಿಗಳು ಬಂದು ಗಡಿಭಾಗದ ಕಲ್ಲನ್ನುಹಾಕಿದ್ದು, ಈಗ ದಿಢೀರ್‌ ಜಮೀನು ತೆರವುಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. -ಶಾರದಮ್ಮ, ರೈತ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next