ದೇವನಹಳ್ಳಿ: ಒಂದೆಡೆ ಲಾಕ್‌ಡೌನ್ ಕಾರಣದಿಂದಾಗಿ ಜಿಲ್ಲೆಯಲ್ಲಿವಾರದಿಂದೀಚೆಗೆ ಬಿದ್ದ ಮಳೆಗೆ ಕೃಷಿ ಚಟುವಟಿಕೆ ಗರಿಗೆದರಿದ್ದು,ಭೂಮಿಯನ್ನು ಹದ ಮಾಡಿಕೊಂಡ ರೈತರು ಇದೀಗ ಬಿತ್ತನೆಕಾರ್ಯಕ್ಕೆ ಮುಂದಾಗುತ್ತಿದ್ದಾರೆ.
ರೈತರ ಮೊಗದಲ್ಲಿ ಸಂತಸ ಬೇಸಿಗೆಯಿಂದ ತತ್ತರಿಸಿದ ರೈತರುಕಳೆದ ವಾರ ಬಿದ್ದ ಮಳೆಯಿಂದಾಗಿ ಹರ್ಷಗೊಂಡಿದ್ದಾರೆ. ರೈತರುಬಿತ್ತನೆಗೆ ಬೇಕಾದ ರೀತಿಯಲ್ಲಿ ಹೊಲಗದ್ದೆಗಳನ್ನುಹದ ಮಾಡಿದ್ದಾರೆ.ಕಳೆದ ವರ್ಷಮಳೆ ಚನ್ನಾಗಿ ಬಂದಿತ್ತು. ಜಿಲ್ಲೆ ಬರಡು ಜಿಲ್ಲೆಯಾಗಿದ್ದು ಯಾವುದೇ ಶಾಶ್ವತ ನೀರಾವರಿ ಇಲ್ಲದೆ ಮಳೆ ಆಶ್ರಿತವಾಗಿ ಕೃಷಿ ಪ್ರಧಾನವಾಗಿದೆ. ಈಗಾಗಲೇ ಕೊರೊನಾ ಸಂಕಷ್ಟದಿಂದಘೋಷಿಸಿರುವ ಲಾಕ್‌ಡೌನ್ ನಿಂದ ಬೆಳೆದ ಹೂ ಹಣ್ಣು ತರಕಾರಿಮತ್ತಿತರ ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೆ ಬೆಲೆಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದುಸ್ಥಿತಿಗೆಇಳಿದ ರೈತರಿಗೆ ಕೊರೊನಾ ಕಾಟ ಹೀಗೆ ಮುಂದುವರಿದರೆ ಬಿತ್ತನೆಕಾರ್ಯಕ್ಕೆ ಬೇಕಾದ ರಸಗೊಬ್ಬರ ಮತು ಬಿತ್ತನೆ ಬೀಜಗಳಿಗೆಕಷ್ಟವಾಗುತ್ತಿದೆ. ಲಾಕ್‌ಡೌನ್ ಹಿನ್ನೆಲೆ ಬಿತ್ತನೆ ಬೀಜ, ರಸಗೊಬ್ಬರಸರ್ಕಾರ ಪೂರೈಸುತ್ತಾರೆಯೇ ಎಂಬ ಚರ್ಚೆ ಪ್ರಾರಂಭವಾಗಿದೆ.ಕೊರೊನಾ ಅವಾಂತರದಿಂದಾಗಿ ಅಗತ್ಯ ರಸಗೊಬ್ಬರಗಳಬೆಲೆ 6-7ಪಟ್ಟು ಹೆಚ್ಚಿಸಿದ್ದು ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಯಾವ ರೀತಿ ಸಿದ್ಧತೆ ಕೈಗೊಳ್ಳುತ್ತಿದೆ ಎಂದು ರೈತರು ಕಾದು ನೋಡಬೇಕಾಗಿದೆ.
ಕೃಷಿ ಇಲಾಖೆಯು ಈ ಬಾರಿ64ಸಾವಿರ ಹೆಕ್ಟರ್ ಬಿತ್ತನೆ ಮಾಡುವ ಗುರಿಯನ್ನು ಹೊಂದಿದೆ.ತೊಗರಿ ಬಿತ್ತನೆ ಬೀಜಗಳನ್ನು ಇನ್ನೊಂದು ವಾರದಲ್ಲಿ ದಾಸ್ತಾನುಮಾಡು ಜನರಿಗೆ ನೀಡಲಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ರಾಗಿ ಬಿತ್ತನೆ ಬೀಜ ಮತ್ತು ಮುಸುಕಿ ಜೋಳವನ್ನು ದಾಸ್ತಾನುಮಾಡಿ ರೈತರಿಗೆ ನೀಡಲಾಗುವುದು. ಶೇ. 70 ರಾಗಿಯನ್ನುರೈತರು ಬಿತ್ತನೆ ಮಾಡುತ್ತಾರೆ.
ನೀಲಗಿರಿ ಮರಗಳನ್ನು 4500ಹೆಕ್ಟೆರ್ ತೆಗೆದಿರುವುದರಿಂದ 4500 ಸಾವಿರ ಹೆಕ್ಟೆರ್ ಕೃಷಿ ಚಟುವಟಿಕೆಯಲ್ಲಿ ತೊಡಗುವರು ಇದ್ದಾರೆ ಎಂದು ಕೃಷಿ ಇಲಾಖೆಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಾಂñರ ಜಿಲ್ಲೆಯಲ್ಲಿ ನಾಲ್ಕೂ ತಾಲುಕುಗಳಿಂದ ರಾಗಿ50,468 ಹೆಕ್ಟರ್, ತೊಗರಿ 1,020 ಹೆಕ್ಟರ್, ಮುಸುಕಿನ ಜೋಳ8,940 ಹೆಕ್ಟರ್ , ಹಲಸಂದಿ 440 ಹೆಕ್ಟೆರ್, ಬಿತ್ತನೆ ಗುರಿಯನ್ನುಹೊಂದಲಾಗಿದೆ ಎಂದುಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್.ಮಹೇಶ್