Advertisement
ವಿಕಾಸಸೌಧದ ಸಭಾಂಗಣದಲ್ಲಿ ಹೆಕ್ಸಗಾನ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಧರ್ಮರಾಜನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
Related Articles
Advertisement
ಕಂಪೆನಿ ಒದಗಿಸುವ ಆವಿಷ್ಕಾರಕ ತಂತ್ರಜ್ಞಾನಗಳಿಂದ ಯಂತ್ರೋಪಕರಣಗಳ ನಿಖರ ಉಪಯೋಗದಿಂದ ಕೃತಕ ಬುದ್ಧಿವಂತಿಕೆ ಬಳಸಿ, ರೋಬೋಟಿಕ್ ಬಳಕೆ, ಅಭಿವೃದ್ಧಿಪಡಿಸಿದ ಡಾಟಾವನ್ನು ಬುದ್ಧಿವಂತಿಕೆಯಿಂದ ಬಳಸುವ ಯೋಜನೆಯನ್ನು ಕ್ಷೇತ್ರ ಮಟ್ಟದ ಕೃಷಿ ಚಟುವಟಿಕೆಗಳನ್ನು ನಿಖರ ಬೇಸಾಯ ಪದ್ಧತಿಯಲ್ಲಿ ಮಾಡಲು ರೂಪಿಸಲಾಗಿದೆ.ನೂತನ ಯೋಜನೆಯಲ್ಲಿ ಕ್ಷೇತ್ರಮಟ್ಟದ ಪ್ರಾಯೋಗಿಕ ಕೌಶಲ್ಯಗಳನ್ನು ಕೃಷಿಯಲ್ಲಿ ಅಟೋಮೆಷನ್ ತರುವ ಹಾಗೂ ಸ್ಥಳೀಯ ಬೇಡಿಕೆಗೆ ಅನುಗುಣವಾಗುವಂತೆ ಪಠ್ಯಕ್ರಮಗಳನ್ನು ಕ್ಷೇತ್ರ ಮಟ್ಟದ ಪ್ರಾಯೋಗಿಕ ವಿಷಯಗಳಾದ ಮಣ್ಣು, ಹವಾಮಾನ, ಸ್ಥಳೀಯ ಕ್ಷೇತ್ರ ಪದ್ಧತಿಗಳನ್ನು ಸುಧಾರಣೆ ಮಾಡಿ ತರಬೇತುದಾರರಿಗೆ ತರಬೇತಿ ನೀಡುತ್ತಾ ಗ್ರಾಮೀಣ ಬದುಕನ್ನು ಮತ್ತು ಗ್ರಾಮಸ್ಥರನ್ನು ಹಾಗೂ ಕೃಷಿ ಉದ್ದಿಮೆದಾರರೊಂದಿಗೆ ಸೌಹಾರ್ದತೆಯಿಂದ ಕೃಷಿ ಅಭಿವೃದ್ಧಿಗಾಗಿ ಪೂರಕ ವಾತಾವರಣವನ್ನು ನಿರ್ಮಿಸುವ ಉದ್ದೇಶ ಹೊಂದಿದೆ.
CIDSA ಕೇಂದ್ರಗಳಲ್ಲಿ ತೆರೆಯುವ ಪ್ರಯೋಗಾಲಯಗಳು ಪ್ರಮುಖವಾಗಿ ಕೃಷಿಯನ್ನು ಆಧುನೀಕರಣಗೊಳಿಸುವ ತಂತ್ರಜ್ಞಾನಗಳಾದ ನಿಖರ ಬೇಸಾಯ, ಕೃಷಿಯಲ್ಲಿ ಆಟೋಮೇಷನ್, ಬೇಸಾಯ ಶಾಸ್ತ್ರ, ಕೃಷಿ ಯಂತ್ರೋಪಕರಣಗಳ ವಿನ್ಯಾಸ ಹಾಗೂ ತಯಾರಿಕೆ, ಆಧುನಿಕ ಡ್ರೋನ್ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಕೃಷಿಯನ್ನು ಹವಾಮಾನ ವೈಪರೀತ್ಯಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವಂತೆ ನಿರಂತರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಕಾರ್ಯಯೋಜನೆಯನ್ನು ರೂಪಿಸಲಾಗಿದೆ.
ಸ್ಮಾರ್ಟ್ ಕೃಷಿ ಕೇಂದ್ರಗಳು ರಾಜ್ಯದ ಕೃಷಿಯನ್ನು ಹೆಚ್ಚು ಸುಸ್ಥಿರವಾಗುವಂತೆ ಲಾಭದಾಯಕವಾಗುವಂತೆ ಎಂಜಿನಿಯರಿಂಗ್ ನೂತನ ತಂತ್ರಜ್ಞಾನ ಬಳಸಿ ಜಾಗತಿಕವಾಗಿ ಸ್ಪರ್ಧಾತ್ಮಕ ಮಾದರಿಯಲ್ಲಿ ಗುಣಮಟ್ಟದ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಈ ಕೇಂದ್ರಗಳು ಮುಂದುವರೆದು, ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ತರುವುದು, ಕೃಷಿ ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವುದು, ಸಣ್ಣ- ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಉದ್ದಿಮೆದಾರರನ್ನು ಸೃಷ್ಟಿಸುವುದು ಮತ್ತು ಇವರಿಗೆ ಪೂರಕವಾದ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು. ಅಲ್ಲದೇ ರಾಜ್ಯದಲ್ಲಿ ಕೃಷಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.
ಒಡಂಬಡಿಕೆ ಸಂದರ್ಭದಲ್ಲಿ ಹೆಕ್ಸಾಗಾನ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಧರ್ಮರಾಜನ್ ಕೃಷಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು ಪಾಲ್ಗೊಂಡಿದ್ದರು.