Advertisement

ರೈತರ ಆದಾಯ ದ್ವಿಗುಣಕ್ಕೆ ಒಪ್ಪಂದ

06:53 AM Jun 12, 2020 | Lakshmi GovindaRaj |

ಕೋಲಾರ: ಪ್ರಧಾನಿ ಮೋದಿ 2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮಕ್ಕೆ ಪೂರಕವಾಗಿ ಇಂಡಿಯನ್‌ ಫಾರ್ಮರ್ಸ್‌ ಫರ್ಟಿಲೈಜರ್‌ ಕೋ-ಆಪರೇಟಿವ್‌ ಲಿಮಿಟೆಡ್‌ ಮತ್ತು ಭಾರತೀಯ ಕೃಷಿ ಅನುಸಂಧಾನ  ಪರಿಷತ್‌ ಪರಸ್ಪರ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಇಫ್ಕೋ ಮಾರಾಟ  ವಸ್ಥಾಪಕ ಡಾ.ಸಿ.ನಾರಾಯಣಸ್ವಾಮಿ ತಿಳಿಸಿದರು.

Advertisement

ನಗರದ ಟಿಎಪಿಸಿಎಂಎಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಫ್ಕೋ  ಸಂಸ್ಥೆಯು ನ್ಯಾನೋ ಕೃಷಿ ಪರಿಕರಗಳ ಪರಸ್ಪರ ಸಂಶೋಧನೆ, ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ನಡೆಸುವುದು ಇದರ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು.

ರೈತರಿಗೆ ಅನುಕೂಲ: ಈ ಒಪ್ಪಂದದಿಂದಾಗಿ ಕೃಷಿ ವಿಜ್ಞಾನ ಕೇಂದ್ರಗಳಿಗೆ ಸುಧಾರಿತ ಕೃಷಿ ತಂತ್ರಜ್ಞಾನವನ್ನು ತರಬೇತಿ, ಕೇತ್ರ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣಗಳ ಮೂಲಕ ರೈತರಿಗೆ ತಲುಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಮಹತ್ವದ ಕೊಡುಗೆ: ಈ ಒಪ್ಪಂದದ ಕುರಿತು ನಮ್ಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಎಸ್‌. ಆವಸ್ತಿ, ಸಂಶೋಧನೆ ಕೃಷಿ ಉದ್ಯಮಕ್ಕೆ ಪೂರಕವಾಗಿದ್ದು, ಇದು ಸುಧಾರಿತ ಕೃಷಿ ತಂತ್ರಜ್ಞಾನವನ್ನು ಪರೀಕ್ಷಾ  ಪ್ರಯೋಗಾಲಯದಿಂದ ರೈತರ ಹೊಲಗಳಿಗೆ ತಲುಪಿಸಲು ಎರಡು ಸಂಸ್ಥೆಗಳ ಮಹತ್ವದ ಕೊಡುಗೆ ಎಂದು ಬಣ್ಣಿಸಿದ್ದಾರೆ ಎಂದು ತಿಳಿಸಿದರು.

ದ್ವಿಪಕ್ಷೀಯ ಒಪ್ಪಂದದಿಂದ ಅನುಕೂಲ: ಅತಿ ಹೆಚ್ಚು ರಸಾಯನಿಕಗಳ ಬಳಕೆಯಿಂದ ಆಗುತ್ತಿರುವ ತೊಂದರೆ ತಪ್ಪಿಸಲು ಇಫ್ಕೋ ಸಂಸ್ಥೆ ಮಣ್ಣಿನಲ್ಲಿರುವ ರಸಾಯನಿ  ಕವನ್ನು ನಿರ್ಮೂಲನೆ ಮಾಡಲು ಪಣತೊಟ್ಟಿದೆ, ಈ ದ್ವಿಪಕ್ಷೀಯ  ಒಪ್ಪಂದದಿಂದಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

Advertisement

ಐತಿಹಾಸಿಕ ಕ್ಷಣ: ಈ ಒಪ್ಪಂದ ಪ್ರಧಾನಿ ಮೋದಿ ಅವರ 2022ರ ರೈತರ ಆದಾಯ ದ್ವಿಗುಣ ಕಾರ್ಯಕ್ರಮಕ್ಕೆ ಪೂರಕವಾಗಿದ್ದು, ಈ ಒಪ್ಪಂದ ಒಂದು ಐತಿಹಾಸಿಕ ಕ್ಷಣ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಮಹಾನಿರ್ದೇಶಕ ಡಾ.ಮೊಹಪಾತ್ರ ತಿಳಿಸಿದರು ಎಂದು  ವಿವರಿಸಿದರು.

ಈ ದ್ವಿಪಕ್ಷೀಯ ಒಪ್ಪಂದದಿಂದಾಗಿ ಕೃಷಿ ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಶೇ.15 ರಷ್ಟು ಕಡಿಮೆ ಮಾಡುವುದರಿಂದ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಲಿದೆ  ಎಂದು ತಿಳಿಸಿ, ಇಫ್ಕೋ ಸಂಸ್ಥೆಯ ಮಾರಾಟ ನಿರ್ದೇಶಕ ಯೋಗೇಂದ್ರ  ಕುಮಾರ್‌, ಅನುಸಂಧಾನ ಪರಿಷತ್‌ನ ಉಪಮಹಾ ನಿರ್ದೇಶಕ ಡಾ.ಎ.ಕೆ.ಸಿಂಗ್‌, ಭಾರತ ಸರ್ಕಾರದ ಕೃಷಿ ನಿರ್ದೇಶಕ ಡಾ.ಮಲ್ಹೋತ್ರ ಮತ್ತಿತರರು ಸಹಿ  ಹಾಕಿದ್ದಾರೆ  ಎಂದರು. ಈ ಸಂದರ್ಭದಲ್ಲಿ ಇಫ್ಕೋ ಸಂಸ್ಥೆಯ ಬೆಂಗಳೂರು ವಿಭಾಗದ ಎಚ್‌.ಎಂ.ಸತೀಶ್‌ ಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next