Advertisement
ಲಾಕ್‌ಡೌನಿಂದ ರೈತರು ಸಂಕಷ್ಟ ಎದು ರಿಸುವಂತಾಗಿದ್ದು, ಆಹಾರ ಧಾನ್ಯ ಬೆಳೆದ ರೈತರ ಉತ್ಪನ್ನಗಳಿಗೆ ಶೇ. 50ರಷ್ಟು ಬೆಲೆ ಕುಸಿದಿದೆ. ಭತ್ತ, ಮೆಕ್ಕೆಜೋಳ, ಹತ್ತಿ, ಕಡಲೆ, ತೊಗರಿ ಮತ್ತಿತರ ಬೆಳೆಗಳು, ಹಣ್ಣು, ತರಕಾರಿ ಬೆಳೆದ ರೈತರುಗಳಿಗೆ ಮಾರುಕಟ್ಟೆ, ಖರೀದಿದಾರರು ಇಲ್ಲದೆ ಶೇ.40ರಷ್ಟು ಉತ್ಪನ್ನಗಳು ಹಾಳಾಗಿದೆ. ರಾಜ್ಯದಲ್ಲಿ ಬೆಳೆದ ದ್ರಾಕ್ಷಿ, ಕರ್ಬುಜ, ಕಲ್ಲಂಗಡಿ, ಬಾಳೆ, ಪಪ್ಪಾಯ, ಟೊಮೋಟೊ ಬೆಳೆಗಳನ್ನು ಕೆಲವು ರೈತರು ಜಮೀನಿನಲ್ಲಿಯೇ ಉಳುಮೆ ಮಾಡಿ ನಾಶಮಾಡಿದ್ದಾರೆ. ಮತ್ತೆ ಕೆಲ ವರು ರಸ್ತೆಬದಿಯಲ್ಲಿ ಸುರಿದರು. ಇದರಿಂದ ಶೇ.40ರಷ್ಟು ಹಣ್ಣು, ತರಕಾರಿಗಳು ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ರೈತರಿಗೆ 1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದರು. ಕಬ್ಬು ಬೆಳೆದ ರೈತರಿಗೆ 4-5ತಿಂಗಳಾದರೂ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸಿಲ್ಲ. ಹೀಗಾಗಿ ಸಾಲ ಮರು ಪಾವತಿ ಅಸಾಧ್ಯವಾಗಿದೆ. ಸಕ್ಕರೆ ಬೆಲೆ ಕುಸಿದಿದೆ ಹೊರದೇಶಕ್ಕೆ ರಫ್ತು ಆಗುತ್ತಿಲ್ಲ ಎಂದು ಕಾರ್ಖಾನೆಗಳ ಮಾಲೀಕರು ಸಬೂಬು ಹೇಳುತ್ತಿದ್ದಾರೆ.
ಮಾರ್ಚ್ 31ರ ವರೆಗೆ ಮರುಪಾವತಿ ಗಡುವು ವಿಸ್ತರಣೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.