Advertisement

Kappattagudda: ಕಪ್ಪತ್ತಗುಡ್ಡ ಸೇರಿ 6 ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಒಪ್ಪಿಗೆ

11:19 PM Oct 11, 2023 | Team Udayavani |

ಬೆಂಗಳೂರು: ಕಪ್ಪತ್ತಗುಡ್ಡ, ಬುಕ್ಕಾಪಟ್ಟಣ, ಕಾಮಸಂದ್ರ, ನಾಗರಹೊಳೆ, ಕಾವೇರಿ ವಿಸ್ತರಿತ ವನ್ಯಜೀವಿ ಧಾಮ ಸೇರಿ ರಾಜ್ಯದ 6 ಅರಣ್ಯ ಪ್ರದೇಶಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಿಸಲು ಸಂಪುಟ ಉಪಸಮಿತಿ ಸಭೆಯು ತಾತ್ವಿಕ ಅನುಮೋದನೆ ನೀಡಿದೆ.

Advertisement

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಅಲ್ಲಿ ತೆಗೆದುಕೊಳ್ಳುವ ನಿರ್ಣಯವನ್ನು ಶಿಫಾರಸಿನ ಮಾದರಿಯಲ್ಲಿ ಕೇಂದ್ರ ಪರಿಸರ ಸಚಿವಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ರಾಜ್ಯದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

2011ರಲ್ಲಿ ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಈ ವಲಯಗಳಲ್ಲಿ ಉತ್ತೇಜಕ ಚಟುವಟಿಕೆ, ನಿರ್ಬಂಧಿತ ಚಟುವಟಿಕೆ ಮತ್ತು ನಿಷೇಧಿತ ಚಟುವಟಿಕೆಗಳನ್ನು ವರ್ಗೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಪ್ಪತ್ತಗುಡ್ಡ ವನ್ಯಜೀವಿಧಾಮವು 244.15 ಚದರ ಕಿಲೋಮೀಟರ್‌ ಇದ್ದು, ಇದರಲ್ಲಿ 23.804 ಚದರ ಕಿ.ಮೀ. ಅರಣ್ಯ ಹಾಗೂ 298.890 ಚದರ ಕಿ.ಮೀ. ಅರಣ್ಯೇತರ ಪ್ರದೇಶವಿದೆ. 322.695 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾಪವಿದೆ.

ಬುಕ್ಕಾಪಟ್ಟಣದಲ್ಲಿರುವ ಚಿಂಕಾರ ವನ್ಯಜೀವಿಧಾಮವು 136.11 ಚದರ ಕಿ.ಮೀ. ಇದ್ದು, 18.5662 ಚದರ ಕಿ.ಮೀ. ಅರಣ್ಯ ಮತ್ತು 138.52 ಚದರ ಕಿ.ಮೀ. ಅರಣ್ಯೇತರ ಪ್ರದೇಶ ಸೇರಿ ಒಟ್ಟು 157.0862 ಚ.ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲಾಗುತ್ತದೆ.

Advertisement

ಇನ್ನು 78.62 ಚ.ಕಿ.ಮೀ. ವಿಸ್ತೀರ್ಣವಿರುವ ಕಾಮಸಂದ್ರ ವನ್ಯಜೀವಿ ಧಾಮದ 93.27 ಚದರ ಕಿ.ಮೀ.ಅನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಸೇರಿ 643.39 ಚದರ ಕಿ.ಮೀ. ಇರುವ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದ 573.97 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಲು ಪ್ರಸ್ತಾಪಿಸಲಾಗಿದೆ.

ಅದೇ ರೀತಿ ಅಣಶಿ ರಾಷ್ಟ್ರೀಯ ಉದ್ಯಾನ, ದಾಂಡೇಲಿ ವನ್ಯಜೀವಿಧಾಮಗಳ 669.06 ಚದರ ಕಿಲೋಮೀಟರ್‌ ವ್ಯಾಪ್ತಿ ಮತ್ತು ಕಾವೇರಿ ವಿಸ್ತರಿತ ವನ್ಯಜೀವಿಧಾಮದ 145.369 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ ವಲಯವಾಗಿ ಘೋಷಿಸುವ ಪ್ರಸ್ತಾಪವಿದೆ.

Advertisement

Udayavani is now on Telegram. Click here to join our channel and stay updated with the latest news.

Next