Advertisement

ಇಂದಿನಿಂದ ಅಗ್ನಿಪಥ್‌ ಸೇನಾ ನೇಮಕಾತಿ: ಮೊದಲ ಬಾರಿ ಉಡುಪಿ ಆತಿಥ್ಯ

12:00 AM Jul 17, 2023 | Team Udayavani |

ಉಡುಪಿ: ಕೃಷ್ಣನಗರಿಯಲ್ಲಿ ಇಂದಿನಿಂದ ಜು. 25ರ ವರೆಗೆ ನಡೆಯಲಿರುವ ಅಗ್ನಿಪಥ್‌ ರ‍್ಯಾಲಿಗೆ ಜಿಲ್ಲಾಡಳಿತ ಮೊದಲ ಬಾರಿಗೆ ಆತಿಥ್ಯ ವಹಿಸುತ್ತಿದೆ.

Advertisement

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣ ಇದಕ್ಕಾಗಿ ಸಜ್ಜುಗೊಂಡಿದ್ದು, ಉಡುಪಿಯ ಯುವಕರು ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಉಡುಪಿಯಲ್ಲಿ ಇದು ಮೂರನೇ ಬಾರಿಗೆ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಯಾಗಿದ್ದು, 2013, 2020 ಇದೀಗ ಅಗ್ನಿಪಥ್‌ ರ‍್ಯಾಲಿ ಸೇರಿ ಮೂರನೇ ಸೇನೆ ನೇಮಕ ರ‍್ಯಾಲಿ ಉಡುಪಿಯಲ್ಲಿ ನಡೆಯುತ್ತಿದೆ. ಅಗ್ನಿಪಥ್‌ ರ‍್ಯಾಲಿ ಮೊದಲ ಬಾರಿಗೆ ನಡೆಯುತ್ತಿದ್ದು, ಉಡುಪಿ, ದ.ಕ. ಸಹಿತ 11 ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲಾಡಳಿತದಿಂದ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ದಿನಕ್ಕೆ 600ರಿಂದ ಸಾವಿರ ಮಂದಿಗೆ ಪರೀಕ್ಷೆ ನಡೆಯಲಿದೆ. ಈ ವರ್ಷ ಲಿಖಿತ ಪರೀಕ್ಷೆಯಲ್ಲಿ 6,800 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. 6,800 ಅಭ್ಯರ್ಥಿಗಳ ಪೈಕಿ ಜಿಲ್ಲೆಯಿಂದ ಭಾಗವಹಿಸುತ್ತಿರುವುದು 59 ಮಂದಿ ಮಾತ್ರ. ಈ ಭಾಗದ ಯುವಕರನ್ನು ರಕ್ಷಣ ಪಡೆಗಳಿಗೆ ಸೇರುವಂತೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕರಾವಳಿಯ ಯುವಕರು ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸುವಂತಾಗಬೇಕು ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಜ್ಜರಕಾಡು ಕ್ರೀಡಾಂಗಣ ಸೇನೆ, ಪೊಲೀಸ್‌ ನೇಮಕಾತಿ ರ‍್ಯಾಲಿಗೆ ಪೂರಕವಾಗುವಂತ ಮೂಲಸೌಕರ್ಯ ಉತ್ತಮ ವ್ಯವಸ್ಥೆ ಹೊಂದಿದೆ. ಈಗಾಗಲೇ ಸೇನೆಯ ಅಧಿಕಾರಿಗಳ ತಂಡ ಅಜ್ಜರಕಾಡು ಕ್ರೀಡಾಂಗಣಕ್ಕೆ ಆಗಮಿಸಿ ಸಿದ್ಧತೆ ಕೆಲಸ ಪೂರ್ಣಗೊಳಿಸಿದ್ದಾರೆ. ನಗರಸಭೆ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್‌ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಲಾಗಿದೆ.

ಟೀಮ್‌ ನೇಷನ್‌ ಫ‌ಸ್ಟ್‌ ಜಾಗೃತಿ
ಜಿಲ್ಲೆಯಲ್ಲಿ ರಕ್ಷಣ ಪಡೆಗಳಿಗೆ ಯುವಕರ ನಿರುತ್ಸಾಹ ಗಮನಿಸಿದ ಟೀಮ್‌ ನೇಶನ್‌ ಫ‌ಸ್ಟ್‌ ಸಂಘಟನೆ ಜಾಗೃತಿ, ಮಾರ್ಗದರ್ಶನ ತರಬೇತಿ ಮೂಲಕ ಯುವಕರನ್ನು ಸೇನೆ ಸೇರಲು ಪ್ರೋತಾಹಿಸುತ್ತಿದೆ. 11 ವರ್ಷಗಳಿಂದ ತರಬೇತಿ, ಮಾರ್ಗದರ್ಶನ ನೀಡುತ್ತಿರುವ ಟೀಮ್‌ ನೇಶನ್‌ ಫ‌ಸ್ಟ್‌ ಸೇನೆ ನೇಮಕಾತಿ ಸಂದರ್ಭ ಯುವಕರನ್ನು ಸಜ್ಜುಗೊಳಿಸುತ್ತಿದೆ. ನೇಶನ್‌ ಫ‌ಸ್ಟ್‌ ನಿಂದ ತರಬೇತಿ ಪಡೆದ 8 ಯುವಕರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಸೂರಜ್‌ ಕಿದಿಯೂರು ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಯುವಕರು ಜಾಗೃತಿ, ಸರಿಯಾದ ಮಾರ್ಗದರ್ಶನ ಇಲ್ಲದೆ ಸೇನೆ ಸೇರ್ಪಡೆ ತರಬೇತಿ ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಕೆಲವು ವರ್ಷಗಳಿಂದ ನಿರಂತರ ಜಾಗೃತಿ ಮೂಡಿಸುತ್ತಿರುವ ಪರಿಣಾಮ ಯುವಕರು ಹೆಚ್ಚಿನ ಆಸಕ್ತಿ ತೋರಿ ಮುಂದೆ ಬರುತ್ತಿದ್ದಾರೆ. ಸೇನೆ ಸೇರುವ ಯುವಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ತರಬೇತಿ ನೀಡುತ್ತೇವೆ ಎಂದು ಸೂರಜ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next