Advertisement
ಮಂಡ್ಯದ ವಿವೇಕ ಶಿಕ್ಷಣ ವಾಹಿನಿ ಸ್ಥಾಪಕ ನಿತ್ಯಾನಂದ ವಿವೇಕವಂಶಿ ಮಾತನಾಡಿ, ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಮಾಡಿದ ಭಾಷಣ ಪ್ರಪಂಚದಲ್ಲಿ ಭಾರತದ ಘನತೆ ಮತ್ತು ಗೌರವ ಹೆಚ್ಚಿಸಲು ಕಾರಣವಾಯಿತು. ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಪರಿಚಯಗೊಳ್ಳಲು ಸ್ವಾಮೀಜಿ ಅವರ ಭಾಷಣವೇ ಕಾರಣ. ಅಂತಹ ಮಹಾನ್ ಪುರುಷರ ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ದೇಶ ಕಟ್ಟಲು ಶ್ರಮಿಸಬೇಕು ಎಂದರು.
ಕಾಲೇಜಿನ ಪ್ರಮುಖರು, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಮಾಜಿ ಯೋಧ ಬ್ರಿ| ಐ. ಎನ್. ರೈ, ಮಕ್ಕಳ ತಜ್ಞ ಡಾ| ಸಂಜೀವ ರೈ, ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ| ಆಶಾಜ್ಯೋತಿ ರೈ, ಮೈಟ್ ಎಂಜಿನಿಯರಿಂಗ್ ಕಾಲೇಜು ಸಂಚಾಲಕಿ ಸವಿತಾ ಚೌಟ, ಪ್ರಮುಖರಾದ ವಸಂತ ಶೆಟ್ಟಿ, ದಿವಾಕರ ಸಾಮಾನಿ, ಕರುಣಾಕರ ಶೆಟ್ಟಿ, ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಕಿಶೋರ್ ಕುಮಾರ್ ರೈ, ಪ್ರತಿಮಾ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ರಥಯಾತ್ರೆ ನಂತೂರಿನ ಶ್ರೀ ಭಾರತಿ ಕಾಲೇಜು ಹಾಗೂ ಮಧ್ಯಾಹ್ನ ಕೆನರಾ ಕಾಲೇಜಿಗೆ ಭೇಟಿ ನೀಡಿತು. ಸ್ವಾಮಿ ವಿವೇಕಾನಂದರ ಭಾಷಣದ ತುಣುಕು, ಸಾಧನೆಯ ಬಗ್ಗೆ ಮಾಹಿತಿ, ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣ ಗಳನ್ನು ಬಿತ್ತರಿಸಲಾಯಿತು. ರಥವು ಸಂಜೆ ಕೋಟೆಕಾರು ಮೂಲಕ ಕೇರಳಕ್ಕೆ ಪ್ರಯಾಣ ಬೆಳೆಸಿತು.