Advertisement

ಕಾರಂತರ “ಇನ್ನೊಂದೇ ದಾರಿ’

10:58 PM Nov 09, 2020 | mahesh |

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

Advertisement

ನಡೆದಾಡುವ ವಿಶ್ವಕೋಶ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಕೆ ಶಿವರಾಮ ಕಾರಂತರ “ಇನ್ನೊಂದೇ ದಾರಿ’ಯು ಮಾನವೀಯ ಸಂವೇದನೆಯ ಕೃತಿಯಾಗಿದೆ. ಪುಟ ತಿರುವಿದಂತೆ ಕುತೂಹಲ ಮೂಡಿಸುವ ಈ ಕೃತಿಯಲ್ಲಿ ಎದುರಾಗುವ ವಾಸ್ತವಿಕ ನೆಲೆಯ ರೋಚಕ ತಿರುವುಗಳು ಮನಸ್ಪರ್ಶಿಯಾಗಿವೆ.

ಇದೊಂದು ಸಾಂಸಾರಿಕ ಕಾದಂಬರಿಯಾಗಿದ್ದು, ಕುಟುಂಬದ ಮಹತ್ವ ವನ್ನು ಸಾರುತ್ತದೆ. ಮಮತೆ, ಸಂಬಂಧಗಳ ಮಹತ್ವ, ವಾತ್ಸಲ್ಯ, ಸ್ನೇಹ, ಪ್ರೀತಿ, ಸಹಾಯ, ಅನುಕಂಪ, ಕರುಣೆ, ಶಿಕ್ಷಣ, ಸಂಶೋಧನೆ, ಮೋಸ ಮುಂತಾದವೆಲ್ಲ ಸಂಸಾರದಲ್ಲಿ ಹೇಗೆಲ್ಲ ಮನÓÕ‌ನ್ನು ಕಾಡುತ್ತವೆ ಎಂಬುದನ್ನು ಲೇಖಕರು ಮನ ಸ್ಪರ್ಶಿಯಾಗಿ ನಿರೂಪಿಸಿದ್ದಾರೆ. ಈ ಕಥೆಯಲ್ಲಿ ಸಂಸಾರದ ವಿವಿಧ ಮಜಲುಗಳು ನಮ್ಮೆದುರು ತೆರೆದುಕೊಳ್ಳುತ್ತವೆ.

ಅಜ್ಜಿ-ಮೊಮ್ಮಕ್ಕಳು, ಅತ್ತೆ-ಸೊಸೆ, ಮಕ್ಕಳ ಪಾತ್ರಗಳೊಂದಿಗೆ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಬಡತನ ಬವಣೆಯನ್ನು ನೀಗಿಸಲು ಹೊನ್ನಜ್ಜಿ ಎಂಬವರು ಮೊಮ್ಮ ಗನನ್ನು ಸಾಹುಕಾರನಿಗೆ ದತ್ತು ನೀಡುತ್ತಾರೆೆ. ಅಜ್ಜಿ ತನ್ನ ಮೊಮ್ಮಕಳಿಗೆ ಬದುಕು ಸಾಗಿಸುವ ಮಾರ್ಗವನ್ನು ಹೇಳಿಕೊಟ್ಟು ಕೊನೆ ಉಸಿರೆಳೆಯುತ್ತಾರೆ.

ಈ ಕಥೆಯ ಪ್ರಮುಖ ಕುಟುಂಬವೆಂದರೆ ನರಸಿಂಹ ಸಾಹುಕಾರ ಅವರದು. ಸಂಪ್ರದಾ ಯವಾದಿ ಹಾಗೂ ಸಾತ್ವಿಕರಾಗಿರುವ ಇವರ ಎಲ್ಲ ಕಾರ್ಯಗಳಿಗೂ ಪತ್ನಿ ಜಾನಕಿಯ ಬೆಂಬಲವಿದೆ. ದಂಪತಿಗೆ ಶ್ರೀರಾಮ ಮತ್ತು ಜಯರಾಮ ಎಂಬಿಬ್ಬರು ಮಕ್ಕಳು. ಇವರು ಬೆಳೆಯುವ ಹೊತ್ತಿಗೆ ಆಧುನಿಕ ಕಾಲಘಟ್ಟ ಆರಂಭವಾಗುತ್ತದೆ. ಸೌಮ್ಯ ಸ್ವಭಾವದ ಶ್ರೀರಾಮನು ಎಂ.ಎ. ಓದಲು ಬೆಂಗಳೂರಿಗೆ ಹೋದಾಗ ಬೇರೆ ಜಾತಿಯ ಚಂಪೆ ಎಂಬ ಯುವತಿಯೊಂದಿಗೆ ಪ್ರೀತಿ ಮೂಡಿ ಬಳಿಕ ವಿವಾಹವೂ ಆಗುತ್ತದೆ. ಚಂಪೆ ಆಧುನಿಕ ಸುಖ ಜೀವನದ ಆಸೆ ಹೊತ್ತು ಸಾಹುಕಾರನ ಸೊಸೆ ಆದವಳು. ಆಕೆಗೆ ಶ್ರೀರಾಮನ ನಿಜವಾದ ಪ್ರೀತಿ ಬೇಕಿರಲಿಲ್ಲ. ಒಂದು ಮಗುವಾದ ಬಳಿಕ ಗಂಡನನ್ನು ತೊರೆದಾಗ ಶ್ರೀರಾಮ ಕಂಗಾ ಲಾಗುತ್ತಾನೆ. ಆ ಹೊತ್ತಿಗೆ ತಮ್ಮ ಜಯರಾಮನ ಮಾತುಗಳು ಜೀವನದ ಆಸೆಯನ್ನು ಉಳಿ ಸುತ್ತವೆ. ಮುಂದೆ ಪ್ರಾಣಿಶಾಸ್ತ್ರದಲ್ಲಿ ಪಿಎಚ್‌.ಡಿ. ಮಾಡುತ್ತಾನೆ. ಕಾದಂಬರಿಯಲ್ಲಿ ಬರುವ ಪ್ರಾಣಿಶಾಸ್ತ್ರದ ಅಧ್ಯಯನ, ಪರಿಸರದ ಚಿತ್ರಣಗಳೆಲ್ಲವೂ ಕುತೂಹಲ ಮೂಡಿಸುತ್ತವೆ. ಬಳಕೆಯಾದ ಶಬ್ದಗಳು ಕಾದಂಬರಿಯ ಘನತೆ ಯನ್ನು ಹೆಚ್ಚಿಸುತ್ತವೆ.

Advertisement

ಕುಟುಂಬದವರು ತೋರಿಸಿದ ಪ್ರೀತಿಯು ಶ್ರೀರಾಮ ನಿಗೆ ಚಂಪೆಯ ಮೋಸವನ್ನು ಮರೆಯಲು ಸಹಕಾರಿಯಾ ಗುತ್ತದೆ. ಆತನ ಮಗುವಿನ ಪಾಲನೆಯ ಜವಾ ಬ್ದಾರಿಯನ್ನು ಜಯರಾಮ ಹೊತ್ತಿದ್ದರಿಂದಲೇ ಶ್ರೀರಾಮ ಪಿಎಚ್‌.ಡಿ. ಮಾಡಲು ಸಾಧ್ಯವಾಯಿತು.

ಕೃತಿಯಲ್ಲಿ ಮನಸ್ಸಿಗೆ ಹೆಚ್ಚು ಹತ್ತಿರವಾಗುವ ಜಯರಾಮನದ್ದು ವಿಶೇಷ ವ್ಯಕ್ತಿತ್ವ. ಶುದ್ಧ ನಾಸ್ತಿಕ, ಹೊಸ ದೃಷ್ಟಿಯಿಂದ ಅನುಭವಗಳನ್ನು ಅಳೆದು ನೋಡಿ ನಿರ್ಧಾರಕ್ಕೆ ಬರುವ ಮನಸ್ಸು. ವೈಚಾರಿಕತೆ ಮೂಸೆಯಲ್ಲಿ ತಿಕ್ಕಿತೀಡಿ ತನಗೆ ಸರಿ ಅನಿಸಿದಂತೆ ಬದುಕುವವನು. ನೇರವಾಗಿ ಮಾತಾಡುವ ಸ್ವಭಾವ. ತರ್ಕಶಾಸ್ತ್ರದ ದರ್ಶನದಲ್ಲಿ ಅಭ್ಯಾಸ ಮಾಡಿದವನು.

ಹಿರಿಯರ ಪ್ರಾಮಾಣಿಕತೆಯನ್ನು ಒಪ್ಪಿಕೊಂಡು ಮುಂದಿನವರು ಸಾಗಬೇಕಾದರೂ “ಕೇವಲ ಪ್ರಾಮಾಣಿಕತೆ ಮಾತ್ರವೇ ಸತ್ಯದ ಅರಿವಿಗೆ ಪೂರ್ಣವಲ್ಲ’, “ಅಪೂರ್ಣ ಅರಿವು ಕೂಡ ಜೀವನ ನಡೆಸಲು ಸಾಲದು’ ಮುಂತಾದ ವಿಷ ಯವನ್ನು ಲೇಖಕರು ಕೃತಿಯಲ್ಲಿ ತಿಳಿಸಿ¨ªಾರೆ.
ಅಂಧತ್ವದ ಪೊರೆ ಕಳಚಿ ಕುಟುಂಬದಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ, ಸಹಕಾರ ಬೆಳೆದು ಪ್ರಜ್ಞಾವಂತ ಜೀವನ ನಡೆಸುವ ಮಾರ್ಗವನ್ನು ಈ ಕಾದಂಬರಿ ತಿಳಿಸುತ್ತದೆ.

-ಲಕ್ಷ್ಮೀ ಬಿ., ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next